ನವದೆಹಲಿ : ದೇಶಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿರುವ ಸೇನಾ ನೇಮಕಾತಿ ಕುರಿತಾದ ಅಗ್ನಿಪಥ ಯೋಜನೆಗೆ ಕೇಂದ್ರ ಚಾಲನೆ ನೀಡಿದೆ. ಶುಕ್ರವಾರದಿಂದ ವಾಯುಪಡೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.
ವಾಯುಪಡೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ ವಾಯುಪಡೆಯ ಅಗ್ನೀವೀರ್ ವಾಯು ಹೆಸರಿನ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ನೇಮಕ ಗೊಳ್ಳವವರನ್ನು ಅಗ್ನಿವೀರರು ಎಂದು ಕರೆಯಲಾಗುವುದು.
ಯೋಜನೆಯಿಂದ ಸಶಸ್ರö್ತ ಪಡೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಯುವಕರ ಸೇರ್ಪಡೆ ಸಾಧ್ಯವಾಗುತ್ತದೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಅಗ್ನಿಪಥ ಯೋಜನೆಯಡಿ ೧೭ ರಿಂದ ೨೩ ವರ್ಷದೊಳಗಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು.
ಅವಧಿಯ ನಂತರ ಈ ಪೈಕಿ ಶೇ. ೨೫ ರಷ್ಟು ಯೋಧರನ್ನು ಪೂರ್ಣಾವಧಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ವೆಬ್ ಸೈಟ್ : https://www.joinindiannavy.gov.in/en/ page/agniveer-ways-to-join.html
Leave a Comment