ಯಲ್ಲಾಪುರ: ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇಡಿ.ಇದರಿಂದ ಆದಾಯ ಹಾಗೂ ಸ್ವಾವಲಂಬಿ ಬದುಕಿನ ಜೊತೆಗೆ ಪರಿಸರ ಕಾಳಜಿಯನ್ನು ಮಾಡಿದಂತಾಗುತ್ತದೆ . ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.ಅವರು : ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತದ ಜಮಗುಳಿಯ ಸವಿತಾ ಗಾಂವಕರ ಅವರ ಜೇನು ಸಾಕಾಣಿಕೆ ಕೇಂದ್ರದಲ್ಲಿ ತಾಲೂಕಾ ಬಿಜೆಪಿ ಮಂಡಳದ ವತಿಯಿಂದ ಶ್ಯಾಮಪ್ರಸಾದ ಮುಖರ್ಜಿಯವರ ನೆನಪಿಗಾಗಿ ಪರಿಸರ ಪೂರಕ ಕಾರ್ಯಕ್ರಮದ ಅಡಿಯಲ್ಲಿ ಅಯೋಜಿಸಿದ್ದ ಜೇನು ಸಾಕಾಣಿಕೆ ಕುರಿತ ಕಾರ್ಯಾಗಾರ ದಲ್ಲಿ ಮಾತನಾಡಿ
ಶ್ಯಾಮಪ್ರಸಾದ ಮುಖರ್ಜಿಯವರ ನೆನಪಿಗಾಗಿ ಸೇವಾ ಕಾರ್ಯ ಪರಿಸರ ಕಾರ್ಯಕ್ರಮ ಹಾಕಿಕೊಂಡು, ಪರಿಸರಕ್ಕೆ ಪೂರಕವಾದ ಜೇನು ಸಾಕಣಿಕೆೆ ಗೆ ಪ್ರೇರಣೆ ನೀಡುವ ಕಾರ್ಯವಾಗಿದೆ. ಪ್ರತಿ ಕ್ರೀಮಿ ಕೀಟ ಪರಿಸರಕ್ಕೆ ಮೂರಕವಾಗಿರುತ್ತದೆಯಾದರೂ ಜೇನು ನೊಣ ಕೊಡುವಂತಹ ಕೈಂಕರ್ಯ ಎಲ್ಲಕ್ಕಿಂತಲೂ ಮಿಗಿಲಾದದ್ದು .ಎರಡುವರ್ಷ ಜೇನುನೊಣಗಳು ಇಲ್ಲವೆಂದಾದರೆ ಸಂಪೂರ್ಣ ಗಿಡಮರಗಳೇ ನಾಶವಾಗುವ ಸಂಭವ ಇರುತ್ತದೆ.
ಇದರ ರಕ್ಷಣೆಗೆ ನಾವು ನಮ್ಮ ರೈತರು ಹೆಚ್ಚು ಒತ್ತು ಕೊಡುವ ಅಗತ್ಯವಿzಜೇನು ಸಾಕಾಣೆ ಮಾಡುವ ರೈತರನ್ನು ಪಕ್ಷದ ವತಿಯಿಂದ ಗೌರವಿಸಿರುವುದು ಸ್ಥಳೀಯ ಉಳಿದ ರೈತರು, ಯುವಕರು – ಹೆಚ್ಚಿನ ಸಂಖ್ಯೆಯಲ್ಲಿ ಜೇನು ಸಾಕಲು ಪ್ರೇರಣೆಯಾಗುತ್ತದೆ ಎಂದರು.
ಮAಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ ಮಾತನಾಡಿ ಮಾತನಾಡಿ ಕೇವಲ ಗಿಡ ನೇಡುವ ಮೂಲಕ ಪರಿಸರ ಕಾಳಜಿ ತೋರದೇ ನಮ್ಮ ಭಾಜಪ ದಿಂದ ಪರಿಸರಕ್ಕೆ ಪೂರಕ ವಿಭಿನ್ನ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುತ್ತಿದೆ. ಪ್ರಕೃತಿ ವೀಕೋಪಗಳ ಕುರಿತು ಮುನ್ಸೂಚನೆ ನೀಡುವಂತಹ ಕಾರ್ಯವೂ ಈ ಜೇನು ಹುಳಗಳಿಂದಾಗುತ್ತದೆ ಎಂಬುದು ನಮ್ಮ ಅನುಭವಕ್ಕೂ ಬಂದಿದೆ. ರೈತ ಸ್ನೇಹಿಯಾಗಿ ಕೆಲಸ ಮಾಡುವುದು ಜೇನು. ಇಂತಹ ಜೇನು ಕೃಷಿ ಮಾ
ಡುವುದು ಎಲ್ಲರ ಆದ್ಯತೆಯಾಗಲಿಎಂದರು.
ಪರಮೇಶ್ವರ ಗಾಂವಕರ ತಮ್ಮ ಜೇನು ಸಾಕಾಣಿಕೆ ಅನುಭವಹಂಚಿಕೊAಡರು. ರವಿ ಕೈಟ್ ಕರ್ , ಕೆ.ಟಿ. ಹೆಗಡೆ, ರವಿ ಭಟ್ಟ ಬರಗದ್ದೆ, ತಿಮ್ಮಾ ಸುರೇಶ ಗುಂಜೀಕರ, ಸುನೀಲ್, ಪ್ರಸಾದ ಹೆಗಡೆ ಇದ್ದರು. ಇದೇ ಸಂದರ್ಭದಲ್ಲಿ ಜೇನು ಕೃಷಿಕರಾದ ಪರಮೇಶ್ವರ ಗಾಂವಕರ, ,ಅಚ್ಯುತ ಕುಮಾರ, ವಿಶ್ವನಾಥ, ಕೆ ಎಸ ಭಟ್ಟ ಆನಗೋಡ,ಗಣಪತಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
Leave a Comment