ಉತ್ತರ ಕನ್ನಡದಲ್ಲಿ ಸ್ಯಾಟಲೈಟ್ ಬಂದರು

ಮAಗಳೂರು: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ಅಥವಾ ಜಿಲ್ಲೆಯ ಇತರ ಯಾವುದಾದರೂ ತೀರ ಪ್ರದೇಶದಲ್ಲಿ ಸ್ಯಾಟಲೈಟ್ ಬಂದರು ನಿರ್ಮಿಸುವ ಕುರಿತು, ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಸೂಕ್ತ ಸ್ಥಳ ಅಂತಿಮಗೊಳಿಸುAತೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್,ಸೂಚಿಸಿದ್ದಾರೆ. ಜೂನ್ 26ರಿಂದ 28ರವರೆಗೆ ಮಡಿಕೇರಿಯಲ್ಲಿ ಜರುಗಿದೆ. ಚಿಂತನ ಬೈಠಕ್‌ನಲ್ಲಿ ಅವರು ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷರಿಗೆ ಈ ಬಗ್ಗೆ ಕಾರ್ಯೋನ್ಮುಖವಾಗುವಂತೆ ನಿರ್ದೇಶನ ನೀಡಿದ್ದಾರೆ.