ಜಂಕ್ಫುಡ್ ಅಥವಾ ಫಾಸ್ಟ್ ಫುಡ್ ಸೇವನೆ ಇತ್ತೀಚೆಗೆ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಈ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯ ಅಸಮತೋಲನ ಶುರು ವಾಗುವುದೆಂಬ ಭಯ ಯಾರಿಗೂ ಇಲ್ಲ.
ನಮ್ಮ ದೇಹದ * ಆರೋಗ್ಯ ಸ್ಥಿತಿ ಉತ್ತಮವಾಗಿರಲು ಪೊಟೀನ್, ವಿಟಾಮಿನ್, ಖನಿಜಗಳು ಬೇಕು. ಆದರೆ, ಈ ಜಂಕ್ ಪುಡ್ಗಳಲ್ಲಿ ಅವೆಲ್ಲ ಸಿಗುವುದಿಲ್ಲ. ನಮ್ಮ ಆರೋಗ್ಯ ಮತ್ತಷ್ಟು ಹದಗೆಡಿಸುವಷ್ಟು ಪದಾರ್ಥಗಳು ಇದರಲ್ಲಿರುತ್ತವೆ.
ಬಾಯಿಗೆ ರುಚಿ ಎನಿಸುತ್ತವೆ ಎಂದು ಬಹಳಷ್ಟು ಜನರು ಜಂಕ್ ಫುಡ್ ತಿನ್ನುತ್ತಾರೆ. ಆಮೇಲೆ ಆಸ್ಪತ್ರೆಗೆ ಹೋದಾಗ ಆರೋಗ್ಯ ಕೆಟ್ಟಿರುವುದು ಗೊತ್ತಾಗುತ್ತದೆ. ಚಿಕ್ಕಮಕ್ಕಳಿಗಂತೂ ಈ ಆಹಾರ ಪದಾರ್ಥಗಳನ್ನು ಕೊಡಲೇಬಾರದು. ಬಹಳಷ್ಟು ವೈದ್ಯರು ಇದರ ಬಗ್ಗೆ ತಿಳಿ ಹೇಳುತ್ತಿದ್ದು, ಆರೋಗ್ಯ ಸರಿಯಾಗಿಟ್ಟುಕೊಳ್ಳಲು ಜಂಕ್ಫುಡ್ ಸೇವನೆಯನ್ನು ಕೂಡಲೇ ಕೈಬಿಡಬೇಕು.
Leave a Comment