
ಜೀವನದಲ್ಲಿ ನಾವು ಆಗಾಗ ಹಿಂದಿರುಗಿ ನೋಡಬೇಕು. ಹಿಂದಿರುಗಿ ನೋಡುವುದರಿಂದ ಮುಂದಿನ ದಾರಿಯಲ್ಲಿ ಸರಿಯಾಗಿ ಹೆಜ್ಜೆ ಊರಲು ಸಾಧ್ಯವಾಗುತ್ತದೆ. ನಮ್ಮ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯಲು ಅನುಕೂಲವಾಗುತ್ತದೆ. ನಾನಂತೂ ಆಗಾಗ ಹಿಂದಿರುಗಿ ನೋಡುತ್ತಿರುತ್ತೇನೆ. ನಾನು ನಡೆದು ಬಂದ ದಾರಿ ನನಗೆ ತೃಪ್ತಿ ಸಮಾಧಾನ ತಂದಿದೆ ಎಂದು ನಿವೃತ್ತ ಇಂಜಿನಿಯರ್ ಅಬ್ದುಲ್ ಅಜೀಜ ಹೇಳಿದರು.ಯಲ್ಲಾಪುರ ಪಂಚಾಯತ ರಾಜ್ ಉಪ ಇಂಜಿನಿಯರಿಂಗ್ ವಿಭಾಗದ ಕಛೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ ದಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರಿಂದ ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಬಂಟ್,ಮಾತನಾಡಿ ನ್ಯಾಯಯುತ ವ್ಯಕ್ತಿ. ಕಛೇರಿಯ ಘನತೆ ಗೌರವವನ್ನು ಕಾಪಾಡಿದ್ದಾರೆ. ಎಂದು ಹೇಳಿದರು.
ಯಲ್ಲಾಪುರ ಸಿವಿಲ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ನಾಗರಾಜ ಗೊಂದಳಿ,ಖಜಾಂಚಿ ವಿನಯ ಹೆಗಡೆ, ಗುತ್ತಿಗೆ ದಾರರಾದ ಗಣಪತಿ ಮುದ್ದೇಪಾಲ,ಎಸ್.ವಿ.ಭಟ್ಟ, ಸಂತೋಷ ನಾಯ್ಕ, ಮೊದಲಾದವರು ವೇದಿಕೆಯಲ್ಲಿ ಇದ್ದರು.
ಸುಬ್ರಹ್ಮಣ್ಯ ಎಂ.ಭಟ್ಟ ಸ್ವಾಗತಿಸಿ,ಮಂಜುನಾಥ ಮೊಗೇರ ಪ್ರಾಸ್ತಾವಿಕ ಮಾತನಾಡಿ, ರಾಘವೇಂದ್ರ ಮೊಗೇರ ಕಾರ್ಯಕ್ರಮ ನಿರ್ವಹಿಸಿದರು
Leave a Comment