ಕಾರವಾರ: ಹೊನ್ನಾವರ ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರಿಕೆ ದೋಣಿಗಳ ನೋಂದಣಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದುವರೆಗೆ ನೋಂದಣಿಯಾಗದೇ ಇರುವ ಮೀನುಗಾರರ ದೋಣಿಗಳ ನೋಂದಣಿ ಮಾಡಲು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ಜು.11ರ ಬೆಳಿಗ್ಗೆ 10ಗಂಟೆಗೆ ಕಾಸರಕೋಡ, ಟೊಂಕಾ, ಮೀನುಗಾರಿಕೆ ಬಂದರು, 12ರ ಬೆಳಿಗ್ಗೆ 10ಗಂಟೆಗೆ ಹಳದೀಪುರ, 13ರ ಬೆಳಿಗ್ಗೆ 10ಗಂಟೆಗೆ ಮಂಕಿ ಮಡಿಯಲ್ಲಿ ದೋಣಿಗಳ ನೋಂದಣಿ ಮಾಡಿಸಲು ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ: 99001 40158, 08387-220 123ಗೆ ಅಥವಾ ಇಮೇಲ್: [email protected]ಗೆ ಸಂಪರ್ಕಿಸಬಹುದಾಗಿದೆ ಎಂದು ಹೊನ್ನಾವರ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment