ಯಲ್ಲಾಪುರ: ತಾಲೂಕಿನ ಲಿಂಗದ ಬೈಲ್, ಮಾದನಸರ,ಬಾಸಲ್, ಕೋಲಿಬೇಣ ಸೇರಿದಂತೆ ವಿವಿಧೆಡೆ ಮನೆಗಳು ಕುಸಿದಿರುವ ಘಟನೆಗಳು ನಡೆದಿದೆ. ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಲಿಂಗದಬೈಲ್ ಗ್ರಾಮದ ನಿವಾಸಿಯಾದ ಶ್ಯಾಮಲಾ ಬಾಬು ಮರಾಠಿ ಇವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ.
ಅಂದಾಜು ಹಾನಿ 15,000/- ಆಗಬಹುದಾಗಿದೆ. ಹಾಸಣಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾದನಸರದ ದೊಂಡಿಬಾಯಿ ಜಾನು ಪಾಟೀಲ್ ರವರ ಮನೆಯ ಗೋಡೆ ಬೆಳಗಿನ ಜಾವ ಕುಸಿದು ಬಿದ್ದಿದೆ.
ಮಾವಿನ ಮನೆ ಬಾಸಲ್ ಮಜುರೆಯ ವಾಸುದೇವ ಶಂಕರ್ ಭಾಗವತ ಇವರ ವಾಸ್ತವ್ಯವಿಲ್ಲದ ಹಳೆಯ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿರುತ್ತದೆ.ಸಹಸ್ರ ಲ್ಲಿ ವ್ಯಾಪ್ತಿಯ ಕೋಲಿ ಬೇಣ ದಲ್ಲಿ ಸರಸ್ವತಿ ದೇಶಬಂಡಾರಿಅವರ ಮನೆ ಕುಸಿದು ಅಂದಾಜು ಒಂದು ಲಕ್ಷ ಹಾನಿಯಾಗಿದೆ. ಎಂದು ಕಂದಾಯ ಇಲಾಖೆ ಯಿಂದ ಪ್ರಾಥಮಿಕ ಪರಿಶೀಲನೆ ಯಲ್ಲಿ ತಿಳಿಸಿದ್ದಾರೆ ಅದೃಷ್ಟವಶಾತ್ ಎಲ್ಲಿಯೂ .ಯಾವುದೇ ರೀತಿ ಜನ ಜಾನುವಾರು ಪ್ರಾಣ ಹಾನಿ ಯಾಗಿಲ್ಲ
Leave a Comment