ಭಟ್ಕಳ : ಪಟ್ಟಣದ ಖಾಲಿ ಇರುವ ಕಂಪೌAಡ್‌ನಲ್ಲಿ ಸುಮಾರು 20 ಕೆ.ಜಿ. ಗೋಮಾಂಸ ಸಂಗ್ರಹ ಪತ್ತೆಯಾಗಿದ್ದು ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ರವಿವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಗರದ ದಂಡಿದ ದುರ್ಗಾದೇವಿ ದೇವಸ್ಥಾನದ ಹಿಂದುಗಡೆ ಇರುವ ಮೊಹಮ್ಮದ್ ಬಾಪು ಹೌಸ್ ಎನ್ನುವ ಕಂಪೌAಡ್ ಒಳಗಡೆಯಲ್ಲಿ ಖಾಲಿ ಜಾಗಾದಲ್ಲಿ ಸಿದ್ಧ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 20 ಕೆ.ಜಿ. ಯಷ್ಟು ಗೋಮಾಂಸವನ್ನು ಸಂಗ್ರಹಿಸಿಡಲಾಗಿತ್ತು.
ಸುದ್ದಿ ತಿಳಿದ ನಗರ ಠಾಣೆಯ ಪೊಲೀಸರು ದಾಳಿ ಮಾಡಿದ್ದು ಸಿದ್ದ ಮಾಡುತ್ತಿದ್ದ ಆರೋಪಿ ಗೋಮಾಂಸವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆನ್ನಲಾಗಿದೆ. ಗೋಮಾಂಸವನ್ನು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ನಗರ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ್ ಯಲ್ಲಪ್ಪ ಮಾದರ ದೂರು ನೀಡಿದ್ದು ದೂರನ್ನು ದಾಖಲಿಸಿಕೊಂಡ ಸಬ್ ಇನ್ಸಪೆಕ್ಟರ್ ಸುಮಾ ಬಿ.ಪಿ, ತನಿಖೆ ನಡೆಸಿದ್ದಾರೆ.
Leave a Comment