ದಾಂಡೇಲಿ: ಹೆತ್ತಮ್ಮನ ಮೇಲೆಯೆ ಪುತ್ರನೋರ್ವ ಅತ್ಯಾಚಾರ ನಡೆಸಿದ ವಿಲಕ್ಷಣ ಘಟನೆ ನಗರದ ಟಿಂಬರ್ ಡಿಪೋ ಪ್ರದೇಶದಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ನಡೆದಿದೆ.
24 ವರ್ಷದ ಯುವಕನಾಗಿರುವ ಮಗ ಕುಡಿತದ ದಾಸನಾಗಿದ್ದು, ಭಾನುವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಮಗನಿಗೆ ಊಟ ಮಾಡಿಸಿದ 52 ವರ್ಷದ ತಾಯಿ, ಆನಂತರ ಕುಡಿದು ವಾಂತಿ ಮಾಡಿರುವುದನ್ನು ಸ್ವಚ್ಚಗೊಳಿಸಿ, ಮಲಗಿಸಿದ್ದಾಳೆ.
ರಾತ್ರಿ ಎರಡು ಘಂಟೆಯ ಸಮಯ ತಾನು ಮಲಗಿದ್ದ ಕೊಠಡಿಗೆ ತಾಯಿಯನ್ನು ಮಗ ಕರೆದಿದ್ದನು. ಮಗ ಕರೆದಿರುವುದರಿಂದ ತಾಯಿ ಮಗ ಮಲಗಿರುವ ಕೊಠಡಿಗೆ ಬಂದು ವಿಚಾರಿಸುತ್ತಾಳೆ. ಆದರೆ ಕುಡಿದ ನಶೆಯಲ್ಲಿದ್ದ ಮಗ ನೇರವಾಗಿ ತಾಯಿಯ ಮೇಲೆ ಬಲತ್ಕಾರ ಮಾಡುತ್ತಾನೆ. ಈ ಘಟನೆಯಿಂದ ನೊಂದ ತಾಯಿ ಬಾಗಿಲು ಹಾಕಿ ಮನೆಯ ಹೊರಗಡೆ ಬಂದು ಕುಳಿತುಕೊಳ್ಳುತ್ತಾಳೆ.
ರಾತ್ರಿ ನಾಲೈದು ಘಂಟೆಯ ನಂತರ ಮನೆಯೊಳಗೆ ಹೋಗಿ ಮಗ ಮಲಗಿದ್ದ ಕೊಠಡಿಗೆ ಬಾಗಿಲು ಹಾಕಿ ತಾನು ಇನ್ನೊಂದು ಕೊಠಡಿಯಲ್ಲಿ ಮಲಗಿದ್ದಾಳೆ.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಎದ್ದ ಮಗ ನನಗೆ ಕೆಲಸಕ್ಕೆ ಹೋಗಬೇಕು, ಬಾಗಿಲು ತೆಗಿ ಎಂದು ಹಟ ಹಿಡಿದಿದ್ದಾನೆ. ಮಗನ ಹಟಕ್ಕೆ ತಾಯಿ ಬಾಗಿಲು ತೆಗೆದಿದ್ದಾಳೆ. ಈ ಸಂದರ್ಭದಲ್ಲಿ ಬಟ್ಟೆಯೆಲ್ಲ ಕಳಚಿಕೊಂಡು ಕೊಠಡಿಯಿಂದ ಹೊರ ಬಂದ ಮಗ ಮತ್ತೊಮ್ಮೆ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಮಾಡುತ್ತಾನೆ.
ಅತ್ಯಾಚಾರಕ್ಕೊಳಗಾದ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಿಗ್ಗೆ ದೂರು ನೀಡಿದ್ದಾಳೆ. ಕೂಡಲೆ ಕಾರಪ್ರವೃತ್ತರಾದ ಪಿಎಸೈಗಳಾದ ಕಿರಣ್ ಪಾಟೀಲ, ಯಲ್ಲಪ್ಪ. ಎಸ್ ಅವರುಗಳ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮನ ಕೈಗೊಂಡಿದ್ದಾರೆ.
ಹೆತ್ತಮ್ಮನ ಮೇಲೆಯೆ ಅತ್ಯಾಚಾರ ನಡೆಸಿದ ದುರುಳ ಮಗ ಈಗ ಪೊಲೀಸರ ಬಂಧನದಲ್ಲಿದ್ದು, ನಗರದಲ್ಲಿ ಈ ಘಟನೆ ಆಘಾತಕಾರಿಯಾದ ಸಂಚಲನವನ್ನೇ ಮೂಡಿಸಿದೆ.
Leave a Comment