ಕಾರವಾರ : ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಪಾಲಕರಿಗೆ ಇಲ್ಲಿನ ಸಿ.ಜೆ.ಎಂ ನ್ಯಾಯಾಲಯವು 25,500 ರೂ. ದಂಡ ವಿಧಿಸಿದೆ.
ಕಾರವಾರ ತಾಲೂಕಿನ ಸುಂಕೇರಿ ಬಳಿ ಕಳೆದ ಕೆಲವು ದಿನದ ಹಿಂದೆ ಅಪ್ರಪ್ತ ಬಾಲಕನೋರ್ವ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಆತನನ್ನು ತಡೆದು ವಿಚಾರಿಸಿ, ಈ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಕಾರವಾರದ ಪ್ರದಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಬಾಲಕನ ಪಾಲಕರಿಗೆ 25,500 ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
Leave a Comment