ಯಲ್ಲಾಪುರ ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಗುರು ಪೂರ್ಣಿಮೆಯ ಮಹತ್ವವನ್ನು ವಿವರಿಸುತ್ತಾ, ಗುರುವಿನ ಸಾಮೀಪ್ಯ ಹಾಗೂ ಜಗತ್ತಿನ ಸೃಷ್ಟಿ ಆಗಿದ್ದೆ ಗುರುವಿನಿಂದ. ಸಂಸ್ಕ್ರತ ಶ್ಲೋಕ ಹೀಗಿದೆ ವರ್ಣ ಮಾತ್ರಂ ಕಲಿಸಿದಾತಂ ಗುರು.ಇದರ ಅರ್ಥ ಒಂದಕ್ಷರ ಕೂಡ ಕಲಿಸಿದವರು ಗುರು ಎಂದರ್ಥ. ನಾವಿಲ್ಲಿ ಪ್ರತಿಯೊಬ್ಬರೂ ಗುರುಗಳೇ, ಪ್ರತಿಯೊಬ್ಬರೂ ಶಿಷ್ಯರೇ.ಕಾರಣ ನಾವು ಒಂದಿಲ್ಲೊಂದು ವಿಷಯವನ್ನು ಯಾರಿಂದಲಾದರೂ ಕೇಳಿ ತಿಳಿಯುತ್ತೇವೆ.ಅದರಲ್ಲಿ ಪೂಜ್ಯನೀಯ ಸ್ಥಾನ ಮಾತ್ರ ಗುರುವಿಗಿದೆಯೆಂದರು.
ಸಹಶಿಕ್ಷಕರಾದ ರಾಮ ಟಿ.ಗೌಡ, ನಾಗರಾಜ ಆಚಾರಿ ಉಪಸ್ಥಿತರಿದ್ದರು.ಕವಿಗೋಷ್ಠಿಯಲ್ಲಿ ಶಾಲೆಯ ಮಕ್ಕಳು ಗುರುಗಳಿಗೆ ಸ್ವರಚಿತ ಕವಿತೆಗಳನ್ನು ವಾಚಿಸುವುದರ ಮೂಲಕ ಗುರು ನಮನ ಅರ್ಪಿಸಿದರು.ವಿದ್ಯಾರ್ಥಿಗಳಾದ ಶ್ರಯನಾ ನಾಯ್ಕ,ವಂದನಾ ಬಾಂದಿ,ಗೀತಾ ಗೌಡ, ಪಂಚಮಿ ರಂಗೈ ಶೇಣ್ವಿ,ರಂಜಿತಾ ಗೌಡ,ಗಗನಾ ಗೌಡ,ಕನಿಷ್ಕಾ ರಾಣೆ,ತನ್ವಿ ಸಿದ್ದಿ,ಕವಿಗೋಷ್ಠಿ ಯಲ್ಲಿ ಭಾಗವಹಿಸಿದ್ದರು
ಕನಿಷ್ಕಾರಾಣೆ,ನಿರ್ವಹಿಸಿದರು.ಚಿತ್ರಾ ಸಿದ್ದಿವಂದಿಸಿದರು.
Leave a Comment