ಯಲ್ಲಾಪುರ: ಉದ್ಯಮ ನಗರ ದ ಲ್ಲಿರುವ ಮನೆಯಿಂದ ಕಳೆದ ವಾರ ಕಾಣೆಯಾಗಿದ್ದ ಮಹಿಳೆಯೋರ್ವಳು
ಗುರುವಾರಕಾಳಮ್ಮನಗರದ ಕಾಳಮ್ಮ ಕೆರೆಯಲ್ಲಿ ಶವವಾಗಿಪತ್ತೆಯಾಗಿದ್ದಾಳೆ.
ತಟಗಾರ (ಉದ್ಯಮನಗರ)ನಿವಾಸಿ
ರಾಜೇಶ್ವರಿ ಪಾಂಡುರಂಗ ವರ್ಣೇಕರ್ (48) ಈಕೆ ಜುಲೈ 11 ರಂದು ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದಳು. ಮಹಿಳೆ ಕಾಣೆಯಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಆಕೆಯ ಕುಟುಂಬದವರು ದೂರು ದಾಖಲಿಸಿದ್ದರು.
ಇದೀಗ ಮಹಿಳೆ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಇನ್ನಿತರರು ಕೆರೆಯಲ್ಲಿ ತೆಲುತ್ತಿದ್ದ ಶವವನ್ನುಹೊರತೆಗೆದು ತಾಲೂಕ ಆಸ್ಪತ್ರೆಗೆ .ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment