ಯಲ್ಲಾಪುರ : ತಾಲ್ಲೂಕಿನ ಇಡಗುಂದಿ ಪಂಚಾಯತ ವ್ಯಾಪ್ತಿಯ ಹಂಸನಗದ್ದೆ ಭಾಗದ ಸಿದ್ದಿ ಗಳ ಸಮಸ್ಯೆಗಳನ್ನು ಆಲಿಸಲು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಜನ ಸಂಪರ್ಕ ಸಭೆನಡೆಸಿದರು . ಅಲ್ಲಿನ ಮುಖ್ಯ ಸಮಸ್ಯೆಯಾದ ರಸ್ತೆ ದುಸ್ಥಿತಿ ಆಗಿದ್ದು ಸ್ವತಹ ಅವರೇ ಆ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದು ರಸ್ತೆಯ ಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಶಾಸಕರನಿಧಿಯಲ್ಲಿ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು..
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ನಾರಾಯಣ ಸಿದ್ದಿ, ಗಣೇಶ ಸಿದ್ದಿ,ಶಿವರಾಮ ಸಿದ್ದಿ,ರಮೇಶ ಸಿದ್ಧಿ,ಮಂಜು ಸಿದ್ದಿ,ಶಶಿಧರ ಸಿದ್ದಿ,ದುರ್ಗಿ ಸಿದ್ದಿ ಇನ್ನಿತರರು ಉಪಸ್ಥಿತರಿದ್ದರು.
Leave a Comment