ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣಗಲ್ಲಿಯ ಶಮಾ ಭಾರತ್ ಗ್ಯಾಸ್ ಅಂಗಡಿ ಬಳಿ ಮನೆವೊಂದು ಮಂಗಳವಾರ ಸಂಪೂರ್ಣ ಕುಸಿದು ಬಿದ್ದಿದೆ.ಅತಿಯಾಗಿ ಸುರಿದ ಮಳೆಯಿಂದಾಗಿ
ತೇಜರಾಜ ವಾದಿರಾಜ ಬಾಳಗಿ ಇವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ತೇಜರಾಜ ಅವರ ಅಕ್ಕನ ಮಗ ಅನಿಲ ಭಟ್ ಅವರು ಈ ಮನೆಯಲ್ಲಿ ವಾಸವಾಗಿದ್ದರು.ಅವರು ಇಂದು ಮನೆಯಲ್ಲಿಇರದೇ ಇದ್ದುದರಿಂದ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ಭಾರಿ ಮಳೆ ಗಾಳಿಗೆ ಮನೆಯು ಸಂಪೂರ್ಣ ಬಿದ್ದಿದ್ದು, ಮೇಲಚಾವಾನಿ ಕಿತ್ತು ಹೋಗಿದ್ದು, ಗೋಡೆಗಳು ಕುಸಿದಿವೆ ಬಿದ್ದಿವೆ.ಅಂದಾಜು ೩ ಲಕ್ಷ ಹಾನಿ ಆಗಿದೆ. ಎಂದು ಮಾಲಕರು ತಿಳಿಸಿದ್ದಾರೆ. ಕಂದಾಯ ಇಲಾಖೆ ಯ ಪರಿಶೀಲನೆ ನಂತರ ನಿಖರ ಹಾನಿ ತಿಳಿದು ಬರಲಿದೆ.
Leave a Comment