ಯಲ್ಲಾಪುರ :ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಹೊರಮನೆ ನಾರಾಯಣ ಮಾಬ್ಲೇಶ್ವರ ಭಟ್ಟ ಎನ್ನುವವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಹಾಳು ಮಾಡಿ ಜೇನು ಕದ್ದೊಯ್ದ ಘಟನೆ ನಡೆದಿದೆ
ಹೊರಮನೆಯ ನಾರಾಯಣ ಮಾಬ್ಲೇಶ್ವರ ಭಟ್ಟ ಅವರು ತಮ್ಮ ಮನೆಯ ಅಕ್ಕಪಕ್ಕ ಮತ್ತು ತಮ್ಮದೇ ಅಡಿಕೆ ತೋಟದಲ್ಲಿ, ಹದಿನೆಂಟು ಜೇನುಗೂಡುಗಳನ್ನು ಇರಿಸಿದ್ದರು. ಅವುಗಳಲ್ಲಿ ಎಂಟು ಜೇನುಪೆಟ್ಟಿಗೆಗಳ ಕಳ್ಳರು ಮುಚ್ಚಳ ಕಿತ್ತು, ಪ್ರೇಮುಗಳನ್ನು ಹೊರಗೆಸೆದು ಜೇನುತುಪ್ಪ ಕದ್ದೊಯ್ದಿರುತ್ತಾರೆ.
ಇದರಿಂದಾಗಿ ಭಟ್ಟರ ಜೇನುಗೂಡುಗಳಿಗೆ ಬಹಳ ಹಾನಿಯಾಗಿದ್ದು, ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದರು ಮಂಚೀಕೇರಿ ಉಪ ಪೋಲೀಸ್ ಠಾಣೆಯ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
Leave a Comment