ಯಲ್ಲಾಪುರ :ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಹಳ್ಳಿ ಜಾನು ಬುದ್ದು ಕುಣಬಿ ಎನ್ನುವವರಿಗೆ ಸೇರಿದ ಮನೆಯು ಸುರಿದ ಭಾರೀ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿರುತ್ತದೆ. ಮೊದಲೇ ಮನೆ ಬೀಳಬಹುದೆಂಬ ಸಂಶಯದಲ್ಲಿದ್ದ ಮನೆಯವರು ಕೆಲವು ಬೆಲೆ ಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾದರೂ ಉಳಿದೆಲ್ಲ ದಿನ ಬಳಕೆಯ ವಸ್ತುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುತ್ತವೆ.
ಸೋಗೆ ಹೊಚ್ಚಿಗೆಯ ಬಹಳ ಹಳೆಗಾಲದ ಮನೆ ಇದಾಗಿದ್ದು, ಮನೆ ಕುಸಿತಕ್ಕೊಳಗಾದ ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಪಂಚಾಯತದ ಅಧ್ಯಕ್ಷೆ ರೂಪಾ ಪೂಜಾರಿ, ಪಿ.ಡಿ.ಒ.ಜಿ.ಜಿ.ಶೆಟ್ಟಿ, ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ,ಗ್ರಾ.ಪಂ.ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಗಂಗಾ ಕಿರಣ ಹೆಗಡೆ,ಖೈತಾನ್ ಡಿಸೋಜ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಸೇಕಡಾ ನೂರರಷ್ಟು ಹಾನಿಯಾಗಿದ್ದು ಸುಮಾರು ಹತ್ತು ಲಕ್ಷ ರೂಪಾಯಿಗಳ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. -
Leave a Comment