ಹೊನ್ನಾವರದಿಂದ ಉಡಪಿಗೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಅಂಬ್ಯುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಪ್ಲಾಜಾ ಬಳಿ ಕಂಬಕ್ಕೆ ಡಿಕ್ಕಿಯಾಗಿ, ಅಂಬ್ಯುಲೆನ್ಸ್ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿ ಗಾಯಗೊAಡಿದ್ದಾರೆ.
ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಲ್ಲಿ ಗಜಾನನ ನಾಯ್ಕ ಎನ್ನುವವರು ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೆöÊನ್ ಹ್ಯಾಮರೇಜ್ ಕೂಡ ಆಗುವ ಸಂಭವವಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ತುರ್ತಾಗಿ ದಾಖಲು ಮಾಡುವ ನಿಟ್ಟಿನಲ್ಲಿ ಉಡಪಿ ಆದರ್ಶ ಆಸ್ಪತ್ರೆಯತ್ತ ಅಂಬ್ಯುಲೆನ್ಸ್ ವೇಗದಲ್ಲಿ ಹೊರಟಿತ್ತು. ಈ ವೇಳೆಯಲ್ಲಿ ಅಂಬ್ಯುಲೆನ್ಸ್ ಶಿರೂರು ಟೋಲ್ ಪ್ಲಾಝಾ ಬಳಿಗೆ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೇಟ್ ಬಳಿಯ ಕಂಬಕ್ಕೆ ಗುದ್ದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಾಯಗೊಂಡ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರನ್ನ ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದ ಗಜಾನನ ನಾಯ್ಕ (45). ಲೋಕೇಶ್ ನಾಯ್ಕ (39). ಮಂಜುನಾಥ ನಾಯ್ಕ, (42) ಹಾಗೂ ಜ್ಯೋತಿ ನಾಯ್ಕ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಂಬ್ಯುಲೆನ್ಸ್ ಚಾಲಕ ರೋಷನ್ ರೋಡ್ರಿಗೀಸ್, ಟೋಲ್ ಸಿಬ್ಬಂದಿ ಸಾಂಬಾಜಿ, ಶಶಿಕಾಂತ್ ಹಾಗೂ ಇನ್ನೋರ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟ್ರಾö್ಯಕ್ ಬಳಿ ಆಕಳು. ಮಳೆ ನೀರು
ಟೋಲ್ ಪ್ಲಾಜಾದಲ್ಲಿ ಅಂಬ್ಯುಲೆನ್ಸ್ ಸಂಚಾರಕ್ಕೆ ಪ್ರತ್ಯೇಕ ಟ್ರಾö್ಯಕ್ ಇದ್ದು, ಈ ಟ್ರಾö್ಯಕ್ ನಲ್ಲಿ ಆಕಳು ಮಲಗಿತ್ತೆನ್ನಲಾಗಿದೆ. ಜೊತೆಗೆ ಪ್ಲಾಜಾದಬ ಬಳಿ ನೀರು ನಿಂತಿರುವುದು ವೈರಲ್ ಆದ ಅಪಘಾತದ ಸಿಸಿ ಟಿವಿ ದೃಶ್ಯಾವಳಿ ಕಂಡುಬರುತ್ತಿದೆ.
ಅಂಬ್ಯುಲೆನ್ಸ ವೇಗದಲ್ಲಿ ಬರುತ್ತಿದ್ದ ಕಾರಣ ಟೋಲ್ ಪ್ಲಾಜಾ ಸಿಬ್ಬಂದಿ ಸುಗಮ ಸಂಚಾರಕ್ಕೆ ಅವಕಾಶ ಮಾಡಕೊಡಲು ಮುಂದಾಗಿದ್ದರು. ಆದರೆ ವೇಗವಾಗಿ ಬಂದ ಅಂಬ್ಯುಲೆನ್ಸ್ ಆಕಳಿಗೆ ಡಿಕ್ಕಿ ಹಿಡೆಯುವುದನ್ನ ಚಾಲಕ ತಪ್ಪಿಸಲು ಮುಂದಾಗಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಪ್ಲಾಜಾದಲ್ಲಿ ನಿಂತಿದ್ದ ಮಳೆಯ ನೀರಿನಲ್ಲಿ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಅಂಬ್ಯುಲೆನ್ಸ್ ಸಂಪೂರ್ಣ ಜಖಂ ಆಗಿದೆ.
ಆಂಬುಲೆನ್ಸ್ ಡ್ರೈವರ್ ಅವರ ಹೇಳಿಕೆ;
ಜಿಲ್ಲೆಯಲ್ಲಿ ಆಸ್ಪತ್ರೆ ಇದ್ದಿದ್ದರೆ….!!
ಶಿರೂರು ಟೋಲ್ ಗೇಟ್ ಬಳಿ ನಡೆದ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಇರುವುದರ ಪರಿಣಾಮವೇ ಇಂತಹ ಅವಘಡಕ್ಕೆ ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಿಲ್ಲೆಯಲ್ಲಿ ಹಿಂದಿನಿAದ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಆಗ್ರಹಿಸಿದರೆ ಯಾರೊತಲೆಕಡೆಸಿಕೊಳ್ಳುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗೂ ಅಂಬ್ಯುಲೆನ್ಸ್ ಹಿಡಿದು ಉಡಪಿ, ಮಂಗಳೂರಿನ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಉತ್ತರಕನ್ನಡಿಗರದ್ದಾಗಿದ್ದು, ಅದರ ಪರಿಣಾಮವೇ ನಾಲ್ವರ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಜನಪ್ರತಿನಿಧಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
Leave a Comment