ಭಟ್ಕಳ-ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ನಲ್ಲಿ ಬುದುವಾರ ಸಂಭವಿಸಿದ ಭೀಕರವಾದ ಅಪಘಾತದಲ್ಲಿ ನಾಲ್ಕು ಜನರು ಸಾವನಪ್ಪಿರುತ್ತಾರೆ.
![ಆಂಬುಲೆನ್ಸ್ ಅಪಘಾತಕ್ಕೆ ಕಾರಣವಾದ ಶಿರೂರು ಟೋಲ್ ಗೇಟ್ ಕಂಪನಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ- ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ ಆಗ್ರಹ 1 wp 1658457600801](https://i2.wp.com/canarabuzz.com/wp-content/uploads/2022/07/wp-1658457600801.jpg?ssl=1)
![ಆಂಬುಲೆನ್ಸ್ ಅಪಘಾತಕ್ಕೆ ಕಾರಣವಾದ ಶಿರೂರು ಟೋಲ್ ಗೇಟ್ ಕಂಪನಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ- ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ ಆಗ್ರಹ 2 wp 1658457583044](https://i0.wp.com/canarabuzz.com/wp-content/uploads/2022/07/wp-1658457583044.jpg?ssl=1)
ಅಪಘಾತ ನಡೆದ ವಿಡಿಯೋವನ್ನು ಗಮನಿಸುವಾಗ ಸಿಬ್ಬಂದಿಯವರ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿ ಮನವರಿಕೆ ಆಗುವಂತಹ ವಿಚಾರ.
ತುರ್ತು ವಾಹನಗಳು ಸಂಚರಿಸುವ ದಾರಿಯಲ್ಲಿ ಟೋಲ್ ಗೇಟ್ ಸಿಬ್ಬಂದಿಯವರು ಎರಡೆರಡು ಕಡೆ ಬ್ಯಾರಿಕೇಡನ್ನು ಇಟ್ಟಿರುತ್ತಾರೆ ಹಾಗೂ ಬಹಳ ಹೊತ್ತಿನಿಂದ ರಸ್ತೆಯಲ್ಲಿ ದನ ಮಲಗಿದ್ದರೂ ಸಹ ಅದರ ಬಗ್ಗೆ ಗಮನ ಹರಿಸದೆ ಇದ್ದು ಅಪಘಾತಕ್ಕೆ ನೇರ ಹೊಣೆಗಾರರಾಗಿರುತ್ತಾರೆ.
ಆದುದರಿಂದ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಟೋಲ್ ಗೇಟ್ ಕಂಪೆನಿಯವರ ಮೇಲೆ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾವನ್ನಪ್ಪಿರುವ ಪ್ರತಿಯೊಬ್ಬರಿಗೂ ಕಂಪನಿಯವರಿಂದ ಕನಿಷ್ಠ 30 ಲಕ್ಷ ರೂಪಾಯಿ ತುರ್ತು ಪರಿಹಾರವನ್ನು ಕೊಡಿಸಬೇಕೆಂದು” ಕರ್ನಾಟಕ ರಣಧೀರರ ವೇಧಿಕೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ ಆಗ್ರಹಿಸಿದ್ದಾರೆ.
Leave a Comment