ಯಲ್ಲಾಪುರ: ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯ ದ ವಿದ್ಯಾರ್ಥಿಗಳ ದಾಖಲೆಯ ಸಾಧನೆ ಮಾಡಿ ಉಪರಾಷ್ಟ್ರಪತಿಗಳಿಂದ ಸನ್ಮಾನ, ಅಭಿನಂದನೆ ಸ್ವೀಕರಿಸಿದರು.ರಾಜ್ಯದ ಪ್ರತಿಷ್ಠೆಯ ಕಾಲೇಜು ಗಳಲ್ಲೊಂದಾದ ಉಮ್ಮಚಗಿಯ ಶ್ರೀ ಮಾತಾ ಕಾಲೇಜಿನ ಜ್ಯೋತಿಷ ವಿದ್ಯಾರ್ಥಿ ಗಳು ಎಂಎ ಮತ್ತು ಬಿಎ ಪದವಿ ಪರೀಕ್ಷೆ ಗಳಲ್ಲಿ ರಾಜ್ಯದಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆ ಗೊಂಡು ಉಪರಾಷ್ಟ್ರ ಪತಿ ವೆಂಕಯ್ಯ ನಾಯ್ಡು ಅವರಿಂದ ಸುವರ್ಣ ಪದಕವನ್ನು ಮತ್ತು ಇಂಪೋಸಿಸ್ ಸಂಸ್ಥೆಯು ಕೊಡುವ ವಿಶೇಷ ಪುರಸ್ಕಾರವನ್ನು ಕೂಡ ವಿದ್ಯಾರ್ಥಿಗಳು ಪಡೆದುಕೊಂಡರು.ಮಂಜುನಾಥ್ ಗಾವ್ಕಾರ್ ಯಲ್ಲಾಪುರ ಎಂಎದಲ್ಲಿ ದಲ್ಲಿ ಸರ್ವಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು, ಗುರುಪ್ರಸಾದ ಹೆಗಡೆ ಮತ್ತು ಗಣೇಶ್ ಪ್ರಸಾದ್ ಕೋಣೆಮನೆ ಇವರು ಇಂಪೋಸಿಸ್ ವಿಶೇಷ ಪುರಸ್ಕಾರವನ್ನು ಪಡೆದಿದ್ದಾರೆ.
Leave a Comment