ಹೊನ್ನಾವರ : ಪಟ್ಟಣದ ಕೆಳಗಿನ ಪಾಳ್ಯಾ ನಿವಾಸಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ , ಪ್ರಾಮಾಣಿಕ ಕಾರ್ಯಕರ್ತ ಹೊನ್ನಾವರ ನಗರ ಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ, ಚಂದ್ರಶೇಖರ ಹರಿ ಚಾರೋಡಿಯವರನ್ನು ಹೊನ್ನಾವರ ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.
ಈವರೆಗೆ ಹೊನ್ನಾವರ ನಗರ ಘಟಕದ ಅಧ್ಯಕ್ಷರಾಗಿ ಉತ್ತಮವಾಗಿ, ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದ್ದ, ಕೇಶವ ಲಕ್ಷ್ಮಣ ಮೇಸ್ತ ಇವರನ್ನು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಇಂಟೆಕ್ ಕಾರ್ಯದರ್ಶಿಯಾಗಿ ನೇಮಿಸಿದ್ದರಿಂದ, ಅವರಿಂದ ತೆರವಾದ ಸ್ಥಾನಕ್ಕೆ ಚಂದ್ರಶೇಖರ ಹರಿ ಚಾರೋಡಿ ಅವರನ್ನು ನೇಮಿಸಲಾಗಿದೆ ಎಂದು ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ತುರ್ತು ಸಭೆಯಲ್ಲಿ ಹಿಂದಿನ ಅಧ್ಯಕ್ಷ ಕೇಶವ ಮೇಸ್ತ ಅವರು ಚಂದ್ರಶೇಖರ ಚಾರೋಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಭಾಷ ಮೇಸ್ತ, ಪಕ್ಷದ ಹಿರಿಯ ಮುಖಂಡರಾದ ಜೋಸೆಪ್ ಡಿಸೋಜಾ, ಹನೀಪ್ ಶೇಖ್, ನೆಲ್ಸನ್ ರೊಡ್ರಗಿಸ್, ಮಾದೇವ ನಾಯ್ಕ, ಮನ್ಸೂರ್ ಶೇಖ್, ನವೀನ್ ಡಿಸೋಜಾ, ಕೃಷ್ಣ ನಾಯ್ಕ, ಬಸ್ತ್ಯಾಂವ ಡಿಸೋಜಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Leave a Comment