ಹೊನ್ನಾವರ : ಶಿರೂರು ಟೋಲ್ ಗೇಟ್ ಬಳಿ ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ನಾಲ್ವರಿಗೂ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಬಿಡುಗಡೆಗೊಳಿಸಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ನಿಲ್ದಾಣದ ಬಳಭಾಗದಲ್ಲಿ ಕಸದ ಬುಟ್ಟಿಯಲ್ಲಿ ತುಂಬಿರುವ ಕಸ ವಿಲೇವಾರಿ ಕೂಡಲೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮತನಾಡಿದ ಅವರು, ಹೊನ್ನಾವರದಿಂದ ನೆರೆ ಜಿಲ್ಲೆಗೆ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಹೋಗುವಾಗ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ಕುಟುಂಬಕ್ಕೆ ವಿಮೆಯ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳು ತಲಾ 5 ಲಕ್ಷದಂತೆ 20 ಲಕ್ಷ ಬಿಡುಗಡೆಗೊಳಿಸಿದ್ದಾರೆ.
ಭಟ್ಕಳ ಕ್ಷೇತ್ರದ ನಿವಾಸಿಗಳಾದರೂ ಶಾಸಕ ಸುನೀಲ ನಾಯ್ಕ ಮಾರಿಜಾತ್ರೆ ತಯಾರಿ ನಿಮಿತ್ತ ಬೆಂಗಳೂರಿನ ಹೋಗಲು ಸಾಧ್ಯವಾಗುದಿಲ್ಲ. ಮುಖ್ಯಮಂತ್ರಿ ಬಳಿ ಸಮಸ್ಯೆ ಹೇಳಿ ಪರಿಹಾರ ಹಣ ಬಿಡುಗಡೆಗೊಳೀಸಲು ನನ್ನ ಬಳಿ ಕೇಳಿಕೊಂಡಿದ್ದರು. ಮನಿವಿಯನ್ನು ಇಟ್ಟ ತಕ್ಷಣ ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ ಎಂದರು.
ಜಿಲ್ಲೆಯ ಸಮಸ್ಯೆಯ ಬಗ್ಗೆ ವಿಧಾನಸೌದದಲ್ಲಿ ಧ್ವನಿ ಎತ್ತುತ್ತಿದ್ದು, ಹಲವು ಸಮಸ್ಯೆ ಬಗೆಹರೆದಿದೆ. ಆಸ್ಪತ್ರೆಯ ಬೇಡಿಕೆಯ ಈಗಾಗಲೇ ಪ್ರಶ್ನೆ ಮಾಡಿದ್ದು, ಟ್ರಾಮಾ ಸೆಂಟರ್ ನಿರ್ಮಾಣದ ಭರವಸೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಆ ನಿಟ್ಟಿನಲ್ಲಿ ಮತ್ತೊಮ್ಮೆ ಜಿಲ್ಲೆಯ ಶಾಸಕರು ಮನವಿ ಮಾಡುವ ಮೂಲಕ ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಂಜೂರು ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಓ ಸುರೇಶ ನಾಯ್ಕ, ರಾಜೇಶ ಸಾಲೇಹಿತ್ತಲ್, ಸಾಲ್ಕೋಡ್ ಗ್ರಾ.ಪಂ ಸದಸ್ಯ ಬಾಲಚಂದ್ರ ನಾಯ್ಕ, ಸೇರಿದಂತೆ ರಿಕ್ಷಾ ಚಾಲಕರು, ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment