ಬೆಂಗಳೂರು ಖದೀಮರ ಮಾತಿಗೆ ಮರುಳಾಗಿ ಸೈಬರ್ ದಾಳಿಗೆ ಒಳಗಾದರೆ ತಕ್ಷಣ 112ಕ್ಕೆ ಕರೆ ಮಾಡಿದರೆ ಕೈಬಿಟ್ಟು ಹೋದ ಹಣ ಮತ್ತೆ ನಿಮ್ಮ ಕೈಗೆ ಸಿಗುತ್ತದೆ. ದಾಳಿಗೆ ಒಳಗಾದ ನಂತರ ಬಳುಬವಾಗಿ ಕರೆ ಮಾಡಿದರೆ ಅಥವಾ ದೂರು ಕೊಟ್ಟರೂ ಪ್ರಯೋಜನವಾಗುವುದಿಲ್ಲ.
, ಸೈಬರ್ ಕ್ರೈಂ ಕಡೆಗೆ ಬೆಂಗಳೂರು ನಗರ ಪೊಲೀಸರು ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ’ ಅಳವಡಿಸಿಕೊಂಡಿದ್ದಾರೆ. ಹಣ ಕಳೆದುಕೊಂಡವರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದರೆ ಸೈಬರ್ ಕ್ರೆöÊಂ ಘಟನೆಯ ವರದಿ (ಸಿಐಆರ್) ದಾಖಲು ಮಾಡಿಕೊಳ್ಳುತ್ತಾರೆ ಕಲವೇ ನಿಮಿಷಗಳಲ್ಲಿ ದೂರು ದಾರನ ಮಾಹಿತಿ ಆಧರಿಸಿ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆ ಬ್ಲಾಕ್ ಮಾಡಿಸುತ್ತಾರೆ. ಒಂದು ವೇಳೆ ದೂರುದಾರನ ಹಣದಲ್ಲಿ ಆನ ಲೈನ್ ಶಾಪಿಂಗ್ ಮಾಡಿದರೆ ಆಸರಕು ಸೈಬರ್ ಖದೀಮರ ಕೈ ಸೇರದಂತೆ ಪಡೆದು ಹಣ ಹಿಂಪಡೆಯುತ್ತಾರೆ.
112ಗೆ ಕರೆ ಮಾಡಿ ಕಳೆದ ಮೂರು ತಿಂಗಳಲ್ಲಿ 1,753 ಸಿಐಆರ್ ದೂರು ದಾಖಲು ಮಾಡಿದ್ದಾರೆ. ಇದರಿಂದ 17.18 ಕೋಟಿ ರೂ. ಸೈಬರ್ ಕಳ್ಳರು ಎಗರಿಸಿದ್ದಾರೆ. ಈ ಪೈಕಿ 237 ಕೋಟಿ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಕೋರ್ಟ್ ಮೂಲಕ ಸಂಬAಧಪಟ್ಟವರಿಗೆ 38 ಲಕ್ಷ ರೂ. ವಾಪಸ್ ಕೊಡಿಸಲಾಗಿದೆ ಎಂದು ಕಮಾಂಡ್ ಸೆಂಟರ್ ಡಿಸಿಪಿ.ಕೆ ರಾಮನಾಥ ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು, ಮೊಬೈಲ್ ಸಿಮ್ ಕಂಪನಿ, ಲಕ್ಕಿ ಡ್ರಾ, ಮ್ಯಾಟ್ರಿಮೋನಿಯಲ್ ಒಎಲ್ ಎಕ್ಸ್ ಸೇರಿ ನಾನಾ ಸೋಗಿನಲ್ಲಿ ಸೈಬರ್ ಕಳ್ಳರು ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ. ಜನರು ಸಹ ಗೊತ್ತೋ ಗೊತ್ತಿಲ್ಲದೆಯೋ ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಸಾರ್ವಜನಿಕರು ಸೈಬರ್ ಕಳ್ಳರಿಂದ ವಂಚನೆಗೆ ಒಳಗಾದ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112 ಗೆ ಕರೆ ಮಾಡಿದರೆ ಕಮಾಂಡ್ ಸೆಂಟರ್ ಸಿಬ್ಬಂದಿ ಸಹಾಯ ಮಾಡುತ್ತಿರ ಎಬುದರ ಮೇಲೆ ನಿಮ್ಮ ಹಣ ಬ್ಲಾಕ್ ಮಾಡಿಸುವುದು ನಿರ್ಧಾರ ಆಗುತ್ತದೆ.
ಆದರೆ ಬ್ಯಾಂಕ್ ಖಾತೆಯಿಂದ ಅಪರಿಚಿತರ ಖಾತೆಗೆ ವರ್ಗಾವಣೆಯಾದ ಎರಡು ಗಂಟೆಯೊಳಗಿನ ಅಂತರವನ್ನು ‘ಗೋಲ್ಡನ್ ಅವರ್’ ಎಂದು ಪೊಲೀಸರು ಪರಿಗಣಿಸಿದ್ದಾರೆ. ಸೈಬರ್ ವಂಚನೆಗೆ ಒಳಗಾದ ಕೂಡಲೇ 112ಗೆ ಕರೆ ಮಾಡಿ ಹೆಸರು, ವಿಳಾಸ, ಮೊಬೈಲ್ ನಂಬರ್ ನೋಂದಣಿ ಮಾಡಬೇಕು. ಅನಂತರ ಕಮಾಂಡ್ ಸಂಟರ್‌ನಿAದ ಮೊಬೈಲ್‌ಗೆ ಲಿಂಕ್ ಬರಲಿದೆ. ಆಧಾರ, ಬ್ಯಾಂಕ್ ಖಾತೆ ವಿವರ, ಸೈಬರ್ ಕಳ್ಳರು ವಂಚನೆ ಮಾಡಿರುವ ವಿಧಾನ ಮತ್ತು ಗ್ರೀಸ್ ನಾಟ್ ಫೋಟೋ ಅಪ್‌ಲೋಡ್ ಮಾಡಿ ಸಿಐಟ ದಾಖಲಿಸುವಂತೆ ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ.
ಏನಿದು ಸಿಸ್ಟಂ
ಸೈಬರ್ ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳ ಜತೆ ಮಾಹಿತಿ ಗಳನ್ನು ನೇಮಕ ಮಾಡಲಾಗಿದೆ. ಕಮಾಂಡ್ ಸೆಂಟರ್‌ನು ದಿನದ 24 ಗಂಟೆಯೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. 112ಕ್ಕೆ ಬಂದ ಕರೆ ಸ್ವೀಕರಿಸಿ ಸಂಬAಧಪಟ್ಟ ಬ್ಯಾಂಕ್‌ಗೆ ಇಮೇಲ್ ನಲ್ಲಿ ವಿವರ ಕಳುಹಿಸುತ್ತಾರೆ. ಹಣ ವರ್ಗಾವಣೆ ಆಗಿರುವ ಖಾತೆ ಬ್ಲಾಕ್ ಮಾಡಿಸುತ್ತಾರೆ.
ಒಂದು ಬ್ಯಾಂಕ್ ಖಾತೆ ಯಿಂದ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿದ್ದರೂ ಜಪ್ತಿ ಮಾಡಿಸುತ್ತಾರೆ. ಬಳಿಕ ದೂರು ಪಡೆದು ಎಫ್‌ಐಆರ್ ಮಾಡಿ ಕೋರ್ಟ್ ಮೂಲಕ ಹಣ ವಾಪಸ್ ಕೊಡಿಸಲಾಗು ತ್ತದೆ, ಕ್ರೆಡಿಟ್ ಡೆಬಿಟ್ ಕಾರ್ಡ್, ವೋಚರ್ ಮತ್ತು ಹಣ ಬಳಸಿ ಸೈಬರ್ ಕಳ್ಳರು ಆನ್‌ಲೈನ್ ಶಾಪಿಂಗ್ ಮಾಡಿದ್ದರೆ ಸಂಬAಧಪಟ್ಟ ಕಂಪನಿಗೆ ಕರೆ ಮಾಡಿ ವಂಚಕರ ಕೈಗೆ ಸರಕು ಸೇರದಂತೆ ತಡೆಯುವ ಕೆಲಸ ಸಹ ಪೊಲೀಸರು ಮಾಡುತ್ತಿದ್ದಾರೆ.
ಸೈಬರ್ ಕಳ್ಳರಿಂದ ಹಣ ಕಳೆದುಕೊಂಡ ಕೂಡಲೇ 11 2ಕ್ಕೆ ಕರೆ ಮಾಡಿದರೆ ಸಹಾಯಕ್ಕಾಗಿ ಪೊಲೀಸರು ಸದಾ ಸಿದ್ಧರಿರುತ್ತಾರೆ.
ಕೆ. ರಾಮರಾಜನ್ ಕಂಮಾಡ್ ಸೆಂಟರ್ ಡಿಸಿಪಿ
Leave a Comment