ಹುಬ್ಬಳ್ಳಿ :
ಹುಬ್ಬಳ್ಳಿ ರೈಲ್ವೆಸ್ಟೇಷನ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶಂಕರ ಸುಧಾಕರ ಮಿಶ್ರಾ ಎಂಬುವರಿಗೆ ವಂಚಿಸಿದ್ದಾರೆ. ಕರೆ ಮಾಡಿದ ಅಪರಿಚಿತರು, ಬ್ಯಾಂಕಿನಲ್ಲಿ ಹೆಚ್ಚಿನ ಹಣ ವಹಿವಾಟು ಹೊಂದಿರುವ ಗ್ರಾಹಕ ಸುಭಾಸ ಜವಳಿ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.
ಬೇರೆಯವರ ಖಾತೆಯಿಂದ ಬ್ಯಾಂಕ್ ಮ್ಯಾನೇಜರ್ ಗೆ ವಂಚಿಸಿ 62 ಲಕ್ಷ ರೂಪಾಯಿ ವರ್ಗಾಯಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ನಂತರ ಮೊಬೈಲ್ ನಂಬರಿನಲ್ಲಿ ತಮ್ಮ ವ್ಯವಹಾರದಲ್ಲಿ ಅತೀ ಅವಶ್ಯವಾಗಿ ಹಣ ವರ್ಗಾಯಿಸಬೇಕಾಗಿದ್ದು ಕೂಡಲೇ ಹಣ ವರ್ಗಾಯಿಸಿರಿ ಎಂದು ಹೇಳಿದ್ದಾರೆ. ಖೋಟ್ಟಿಯಾಗಿ ಸೃಪ್ಟಿಸಿದ ಮೇಲ್ ಐಡಿ ಮೂಲಕ ಸಂದೇಶದಲ್ಲಿದ್ದ ಸಹಿ ಹಾಗೂ ಬ್ಯಾಂಕಿನಲ್ಲಿದ್ದ ಸಹಿಗೂ ಹೋಲಿಕೆಯಾಗಿದ್ದರಿಂದ ಸುಬಾಸ ಜವಳಿ ಅವರೆಂದು ನಂಬಿ, 9, 8 ಲಕ್ಷ ರೂಗಳಂತೆ 7 ಸಲ ಒಟ್ಟು 62, 30,649 ರೂ ಹಣ ವರ್ಗಾಯಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment