ಕಾರವಾರ : 2022 – 23 ನೇ ಸಾಲಿನ ಪುಣ್ಯಕೋಟಿ ದತ್ತು ಯೋಜನೆಯಡಿ ಜಿಲ್ಲೆಯಲ್ಲಿರುವ ನೋಂದಾಯಿತ ಗೋಶಾಲೆಗಳಲ್ಲಿನ ಗೋವುಗಳನ್ನು ದತ್ತು ಪಡೆಯಲು ಆನ್ ಲೈನ್ ನಲ್ಲಿ ಆರ್ಥಿಕ ನೆರವು ನೀಡಬಹುದು.
ಯಲ್ಲಾಪುರ ತಾಲೂಕಿನ ಕರಡೊಳ್ಳಿಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗೋವರ್ಧನ ಗೋಶಾಲೆ. ಹೊನ್ನಾವರ ತಾಲೂಕಿನ ಗೇರುಸೊಪ್ಪದ ಶ್ರೀವಿರಾಂಜನೇಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಯ ಅಮೃತಧಾರಾ ಗೋಶಾಲೆ, ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಶ್ರೀರಾಮದೇವ ಭಾನ್ಕುಳಿ ಮಠದ ಗೋಸ್ವರ್ಗ, ಭಟ್ಕಳ ತಾಲೂಕಿನ ಬೈಲೂರಿನ ಶ್ರೀಗೊಪಾಳಕೃಷ್ಣ ಗೋಶಾಲೆ, ಶಿರಸಿ ತಾಲೂಕಿನ ಮಂಜುಗುಣಿಯ ಶ್ರಿವೆಂಕಟೇಶ ಗೋಪಾಲನಾ ಕೇಂದ್ರ, ಸೋಂದಾದ ಶ್ರೀಸುವರ್ಣ ಕರ್ನಾಟಕ ಗೋಶಾಲೆ, ಸ್ವರ್ಣವಲ್ಲಿ ಮಠ, ತಾಲೂಕಿನ ಬೆಣ್ಣೆಗದ್ದೆಯ ಗುರುಕುಲ ವಿದ್ಯಾಪೀಠ ಟ್ರಸ್ಟ್ ನ ಗೋಶಾಲೆಗಳು ನೋಂದಾಯಿತಿಗೊAಡಿವೆ.
ಇಲಾಖಾ ವೆಬ್ ಸೈಟ್ https://punyakoti.karahvs.in/ ನಲ್ಲಿ ಲಾಗಿನ್ ಆಗಿ ಈ ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ ಒಂದು ವರ್ಷಕ್ಕೆ ರೂ. 11000 ನೀಡಿ ದತ್ತು ಪಡೆಯಬಹುದು. ದತ್ತು ನೀಡಿದ ದೇಣಿಗೆಯಲ್ಲಿ ಜಾನುವಾರಿಗೆ ಮೇವು ಪೌಷ್ಠಿಕಾಂಶದ. ಪೂರೈಕೆಗಳು, ಆರೋಗ್ಯ ತಪಾಸಣೆ ಮತ್ತು ಔಷಧಿಗಳಿಗಾಗಿ ವಿನಿಯೋಗಿಸಲಾಗುವುದು. 3 ತಿಂಗಳು. 6 ತಿಂಗಳು, 9 ತಿಂಗಳು ಅಥವಾ ಒಂದು ವರ್ಷದಿಂದ 5 ವರ್ಷಗಳವರೆಗೆ ಬದಲಾಗುವ ಅವಧಿಯನ್ನು ಸಹ ಆಯ್ಕೆಮಾಡಿಕೊಳ್ಳಬಹದು.
ಗೋಶಾಲೆಗಳಿಗೆ ದತ್ತು ತೆಗೆದುಕೊಳ್ಳುವವರ ಶಕ್ತಾö್ಯನುಸಾರ ದೇಣಿಗೆ ನೀಡಿ ಸಹಾಯ ಮಾಡಬಹುದು. ಒಂದು ಹಸುವಿಗೆ ದಿನ ಒಂದಕ್ಕೆ ರೂ. 70 ರಂತೆ ಜಾನುವಾರ ಆಹಾರ ಪೂರೈಕೆಗಾಗಿ ದೇಣಿಗೆ ನೀಡಬಹುದು. ಸ್ವೀಕರಿಸಿದ ಪ್ರತಿ ರೂಪಾಯಿಯಿಂದ ಗೋಶಾಲೆಗಳಲ್ಲಿ ಧನಾತ್ಮಕ ವ್ಯತ್ಯಾಸವನ್ನುಂಟು ಮಾಡಬಹುದು ಎಂದು ಕಾರವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಉಪನಿರ್ದೇಶಕ ಡಾ. ರಾಕೇಶ ಬಂಗ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment