ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ (ಬಿಎಸ್ಎನ್ಎಲ್) ಪುನಶ್ವೇತನಕ್ಕಾಗಿ 3 1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೇಂದ್ರವು ಸಮ್ಮತಿ ನೀಡಿರುವ ಕ್ರಮ ಗಳು ಕಂಪನಿಯ ಸೇವೆಗಳನ್ನು ಉತ್ತ ಮಪಡಿಸಲು, ಹೆಚ್ಚಿನ ತರಂಗಾಂತರ ಹಂಚಿಕೆ ಮಾಡಲು, ಕಂಪನಿಯ ಹಣಕಾಸಿನ ಹೊರೆಯನ್ನು ತಗ್ಗಿಸಲು ಹಾಗೂ ಕಂಪನಿಯ ಫೈಬರ್ ಜಾಲದ ಅವಧಿಯಲ್ಲಿ ಬಲವರ್ಧನೆಗೆ ಗಮನ ನೀಡುತ್ತದೆ.
ಬಿಎಸ್ಎನ್ಎಲ್ಗೆ ನಗದು ರೂಪದಲ್ಲಿ 3 43,964 ಕೋಟಿ ನೀಡಲಾಗುತ್ತದೆ. ನಾಲ್ಕು ವರ್ಷಗಳ 1.20 ಲಕ್ಷ ಕೋಟಿಯನ್ನು ಇತರ ನೆರವುಗಳ ರೂಪದಲ್ಲಿ ನೀಡಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ.
4ಜಿ ಸೇವೆಗಳನ್ನು ಒದಗಿಸಲು ಬಿಎಸ್ಎನ್ಎಲ್ಗೆ ಬೇಕಿರುವ ತರಂಗಾಂತರಗಳನ್ನು ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ಮೂಲಕ ಹಂಚಿಕೆ ಮಾಡಲಿದೆ.
ಮುಂದಿನ ನಾಲ್ಕು ವರ್ಷಗಳ ಬಂಡವಾಳ ವೆಚ್ಚಗಳಿಗಾಗಿ ಸರ್ಕಾರವು 22 ಸಾವಿರ ಕೋಟಿ ಒದಗಿಸಲಿದೆ. ಕಂಪನಿಯ ಹಣಕಾಸಿನ ಹೊರೆಯನ್ನು ತಗ್ಗಿಸಲು ಸರ್ಕಾರವು 33,404 ಕೋಟಿ ಬಾಕಿಯನ್ನು ಷೇರುಗಳನ್ನಾಗಿ ಪರಿವರ್ತಿಸಲಿದೆ.
ಹಾಲಿ ಇರುವ ಸಾಲಗಳ ಮರುಪಾವತಿಗೆ ಹಣ ಹೊಂದಿಸಲು ಸರ್ಕಾರವೇ ಖಾತರಿದಾರ ಆಗಲಿದೆ ಎಂದು ವೈಷ್ಣವ್ ಹೇಳಿದ್ದಾರೆ. ಬಿಬಿಎನ್ಎಲ್ ಕಂಪನಿಯನ್ನು ಬಿಎಸ್ಎನ್ಎಲ್ ಜೊತೆ ವೀಲಿನ ಮಾಡಲಾಗುತ್ತದೆ. ಆ ಮೂಲಕ ಭಾರತ್ನೆಟ್ ಗ್ರಾಮೀಣ ಬ್ರಾಡ್ಬ್ಯಾಂಡ್ ಯೋಜನೆಯ ಮೂಲಸೌಕರ್ಯವನ್ನು ಹೆಚ್ಚು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
Leave a Comment