ಅಂಕೋಲಾ: ಅಕ್ರಮವಾಗಿ ಸಂಗ್ರಹಿಸಿಟ್ಟ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡು, ವುಡ್ ಮಿಲ್ ಜಪ್ತು ಮಾಡಿದ ಘಟನೆ ತಾಲೂಕಿನ ಅಗ್ರಗೊಣದಲ್ಲಿ ನಡೆದಿದೆ.
ಸುಮಾರು ಅಂದಾಜು 1 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ರಗೊಣದ ಜಾನಕಿ ವುಡ್ ಇಂಡಸ್ಟ್ರೀಸ್ ಜಪ್ತು ಮಾಡಿ ವುಡ್ ಮೀಲ್ ಮಾಲೀಕರಾದ ಶಂಕರ್ ಶೇಟ್ ವೆರ್ಣೇಕರ್ ಹಾಗೂ ರಾಮಾರಾಜ್ ಶೇಟ್ ವೆರ್ಣೇಕರ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕೆ.ಸಿ ನೇತೃತ್ವದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಹಾಗೂ ವಲಯ ಅರಣ್ಯಾಧಿಕಾರಿ ಸುರೇಶ್ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕಾಂಬ್ಳೆ, ರಾಘವೇಂದ್ರ ಜಿರಗಾಳೆ, ಪ್ರಶಾಂತ್ ಪಟಗಾರ, ಗೌರಿಶಂಕರ ರಾಯ್ಕರ್, ಅಕ್ಷಯ್ ಕುಲಕರ್ಣಿ, ಅರಣ್ಯ ರಕ್ಷಕರಾದ ಬಾಬು ಶೆಟ್ಟಣ್ಣನವರ್, ಬಸವನಗೌಡ ಬಗಲಿ, ವೆಂಕಟೇಶ್ ನಾಯಕ, ಪುಂಡಲೀಕ ತಾವರಕೇಡ ಕಾರ್ಯಾಚರಣೆ ನಡೆಸಿದ್ದರು.
Leave a Comment