ಶಿರಸಿ: ತಾಲೂಕಿನಲ್ಲಿ ಗಾಳಿ ಮಳೆಗೆ ಅಡಕೆ ಮರಗಳು ಸಾಲಾಗಿ ಮುರಿದುಬೀಳುತ್ತಿವೆ. ಆದ್ರೆ, ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಮರ್ಲಮನೆಯಲ್ಲಿ ಮಂಗಗಳು ಇದಾವುದನ್ನೂ ಲೆಕ್ಕಿಸದೇ ತೋಟದಲ್ಲಿ ದಾಳಿ ನಡೆಸಿ ಅಡಕೆ ಎಳೆಮಿಳ್ಳೆಗಳನ್ನು ತಿನ್ನತೊಡಗಿದ್ದು, ರೈತರನ್ನು ಕಂಗಾಲಾಗಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಕೆಂಪು ಮೂತಿಯ ಮಂಗಗಳ ಹಾವಳಿ ಈ ಭಾಗದಲ್ಲಿ ತೀವ್ರಗೊಂಡಿದೆ. ಆರಂಭದಲ್ಲಿ ಬಾಳೆ ಗೊನೆಗಳನ್ನು ತಿನ್ನುತ್ತಿದ್ದ ಈ ಮಂಗಗಳ ಸಂತತಿಯೂ ಈಗ ಜಾಸ್ತಿ ಆಗಿವೆ. ಕಳೆದ ಒಂದು ವರ್ಷದಿಂದ ಇನ್ನೂ ಬಲಿತಿರದ ಎಳೆ ಅಡಕೆ ಮಿಳ್ಳೆಗಳನ್ನು ತಿನ್ನಲಾರಂಭಿಸಿವೆ. ಈ ಮಂಗಗಳ ಕಾವಲಿಗೇ ನಮ್ಮ ಸಂಪೂರ್ಣ
ದಿನ ವ್ಯಯವಾಗುತ್ತಿವೆ.
ನಾವು ತೋಟಕ್ಕೆ ಬರುತ್ತಿರುವುದನ್ನು ಕಂಡೊಡನೆಯೇ ಅಡಕೆ ಮರದ ಎಲೆಗಳ ಮಧ್ಯೆ ಅಡಗಿ ಕುಳಿತುಕೊಳ್ಳುತ್ತವೆ. ಅಡಕೆ ಗೊನೆ ಪೂರ್ಣ ಖಾಲಿಯೇ ಮಾಡುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ ಇಲ್ಲಿಯ ರೈತ ರೆಡೆ ಸಾಗಿಸಬೇಕು ವಿನಾಯಕ ಹೆಗಡೆ, ಮರಲಮನೆ ಗ್ರಾಮದಲ್ಲಿ 7 ಮನೆಗಳಿದ್ದು, ಬಹುತೇಕ ಎಲ್ಲರ ಮನೆ ಅಡಕೆ ತೋಟದಲ್ಲಿಯೂ ಮಂಗಗಳು ತಿಂ ದು ಹಾಕಿದ ಅಡಕೆ ರಾಶಿ ರಾಶಿ ಬಿದ್ದಿದೆ.
ಒಂದೆಡೆ ಮಳೆಯಿಂದಾಗಿ ಕೊಳೆ ರೋಗದಿಂದ ಅಡಕೆ ಉದುರುತ್ತಿದೆ. ಇನ್ನೊಂದೆಡೆ ಮಂಗಗಳ ಕಾಟದಿಂದ ಅಡಕೆ ಮರವೇ ಬರಿದಾಗುತ್ತಿದೆ. ಮುಂದೆ ಜೀವನ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ರೈತ ಜಿ.ಜಿ.ಹೆಗಡೆ.
ಹಂದಿಗಳ ಕಾಟದಿಂದ ಅಡಕೆ ಗಿಡಗಳು ಸತ್ತರೆ ಅರಣ್ಯ ಇಲಾಖೆ ಪರಿಹಾರ ನೀಡುವುದಾಗಿ ತಿಳಿಸುತ್ತದೆ. ಆದರೆ, ಮಂಗಗಳಿಂದಾದ ಹಾನಿಗೆ ಪರಿಹಾರ ನೀಡುವವರಿಲ್ಲ. ಅರಣ್ಯ ಇಲಾಖೆ ಈ ಮಂಗಗಳನ್ನು ಹಿಡಿಸಿ ಬೇ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Leave a Comment