ವಾಷಿಂಗ್ಟನ್: ವಾಟ್ಸ್‌ಆ್ಯಪ್ ಹೊಸ ಅಪ್‌ಡೇಟ್ ಒಂದನ್ನು ಪರಿಚಯಿಸುವುದಕ್ಕೆ ಸಿದ್ಧವಾಗಿದೆ.
ಈ ಅಪ್ ಡೇಟ್‌ನಲ್ಲಿ ನೀವು ಡಿಲೀಟ್ ಮಾಡಿರುವಂತಹ ಸಂದೇಶವನ್ನು ಮತ್ತೆ ವಾಪಸು ಪಡೆಯಬಹುದು.
ಯಾರಿಗಾದರೂ ಕಳುಹಿಸಿದ ಸಂದೇಶವನ್ನು ನೀವು ಡಿಲೀಟ್ ಮಾಡಿದ ನಂತರ, ವಾಟ್ಸ್ ಆ್ಯಪ್ ”ಅನ್‌ಡು’ ಎನ್ನುವ ಆಯ್ಕೆಯನ್ನು ನಿಮಗೆ ಕೊಡಲಿದೆ. ಆದರೆ ಇದು ಡಿಲೀಟ್ ಫಾರ್ ಮಿ’ ಎಂದು ಕೊಡಲಾಗಿರುವ ಸಂದೇಶಕ್ಕೆ ಮಾತ್ರ ಅನ್ವಯ. ‘ಡಿಲೀಟ್ ಫಾರ್ ಎವೆರಿಒನ್’ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದ್ದರೆ ಅದಕ್ಕೆ ಈ ಅನ್‌ಡು ಅನ್ವಯವಾಗುವುದಿಲ್ಲ.
ಹಾಗೆಯೇ ಈ ಅನ್‌ಡು ಆಯ್ಕೆ ಕೆಲವೇ ಸೆಕೆಂಡುಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಸದ್ಯ ಈ ಆಯ್ಕೆಯು ಬಿಟಾ ವರ್ಷನ್ ಇರುವ ವಾಟ್ಸ್‌ಆ್ಯಪ್ ಖಾತೆಗಳಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರವೇ ಎಲ್ಲರಿಗೂ ಲಭ್ಯವಾಗಲಿದೆ.
Leave a Comment