ಯಲ್ಲಾಪುರ ಪಟ್ಟಣದ ಕೋಡ್ಕಣಿ ಬಿಲ್ಡಿಂಗ್ ನಲ್ಲಿರುವ ತರಭೇತಿ ಕೇಂದ್ರ ದಲ್ಲಿ ಮನು ವಿಕಾಸ ಸಂಸ್ಥೆ ಹಾಗೂ ಸೇವಾ ಸಾಮಾಜಿಕ ವಿಕಾಸ ಸಂಸ್ಥೆ ಸಹಯೋಗದಲ್ಲಿ ಸಿದ್ದಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ಹೊಟೇಲ್ ಮ್ಯಾನೆಜಮೆಂಟ ತರಭೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ಘಾಟಿಸಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ .ಮಾತನಾಡಿ ಇಂದು ಹೊಟೇಲ ಮ್ಯಾನೆಜಮೆಂಟ ಶಿಷ್ಟಾಚಾರ ಕ್ಕೆ ಆದ್ಯತೆ ನೀಡಿ,ಗೌರವಯುತ ವೃತ್ತಿಯಾಗಿ ಪರಿಗಣಿಸಲಾಗುತ್ತಿದೆ.ದೇಶವಿದೇಶಗಳಲ್ಲೂ ವಿಫುಲ ಉದ್ಯೋಗವಕಾಶಗಳಿದ್ದು ,ತರಭೇತಿ ಪಡೆದುಕೊಂಡು ಸುಮ್ಮನೆ ಕೂರದೇ ಸಕ್ರೀಯಗೊಳಿಸಿಕೊಳ್ಳಬೇಕು
ಈ ಸಂಸ್ಥೆ ತರಭೇತಿ ನೀಡುವದಲ್ಲದೇ ಪರಿಪೂರ್ಣ ಉದ್ಯೋಗ ಪಡೆದುಕೊಳ್ಳುವರೆಗೂ ಸಹಕಾರ ನೀಡುತ್ತಿದೆ.ಸರಕಾರದ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಇಂತಹ ಸ್ವಯಂ ಸೇವಕ ಸಂಘ ಗಳ ಪಾತ್ರವೂ ಮುಖ್ಯವಾಗಿರುತ್ತದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ ಸಿದ್ದಿ ಸಮುದಾಯದ ಸರ್ವಾಂಗೀಣ ವಿಕಾಸಕ್ಕೆ ಮನುವಿಕಾಸ ಸಂಸ್ಥೆ ಕಾರ್ಯಯೋಜನೆ ರೂಪಿಸಿದೆ. ೩ ವರ್ಷಗಳಲ್ಲಿ ೧೦೦೦ ಸಿದ್ದಿ ಕುಟುಂಬಗಳ ಆರ್ಥಿಕ ಸ್ಥಿತಿ ದ್ವಿಗುಣಗೊಳ್ಳಬೇಕು
ಎಂಬ ಉದ್ದೇಶದಿಂದ ಸಿದ್ದಿ ಜನರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಕಂಪನಿ , ಹಾಗೂ ಸೌಹಾರ್ಧ ಕೊ ಆಪರೇಟಿವ್ ಸೊಸೈಟಿ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಅವರು ತೋಟಗಾರಿಕೆಯಲ್ಲಿಯೂ ಅಭಿವೃದ್ದಿ ಹೊಂದಲು ಅಡಿಕೆ ಸಸಿ, ಪಂಪಸೆಟ್,ಕೃಷಿ ಹೊಂಡ ನಿರ್ಮಾಣಕ್ಕೆ ನೆರವು , ೭೦ ಕುಟುಂಬಗಳಿಗೆ ೩೨೦ಜೇನು ಪೆಟ್ಟಿಗೆ ನೀಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತ್ತು. ವೇದಿಕೆಯಲ್ಲಿ ಯೋಜನಾಧಿಕಾರಿ ಮೋಹನ ಸಿದ್ದಿ, ತಾÀಲೂಕಾ ಸಂಯೋಜಕ ರಾಮಚಂದ್ರ ಸಿದ್ದಿ, ಅಭಿವೃದ್ಧಿ ಅಧಿಕಾರಿ ಪವನ ಬೊಮ್ಮನಳ್ಳಿ , ಚಂದನಾ ನಾಯ್ಕ ಮುಂತಾದವರು ಇದ್ದರು.ಜೆಸ್ಸಿಕಾ ಪ್ರಾರ್ಥಿಸಿದರು.ಸಂಯೋಜಕಿ ಸ್ವಪ್ನಾ ಧರ್ಮಟ್ಟಿ ಸ್ವಾಗತಿಸಿದರು.ಮನೋಜಕುಮಾರ ನಿರ್ವಹಿಸಿದರು.
Leave a Comment