ಚೀನಾದ ಚೆಂಗ್ಡುನಲ್ಲಿ ಕಠಿಣ ಲಾಕ್‌ಡೌನ್

ಬೀಜಿಂಗ್ (ಎಪಿ):ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಎರಡು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಚೆಂಗ್ಡು ನಗರದಲ್ಲಿ ಚೀನಾದ ಅಧಿಕಾರಿಗಳು ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಮನೆಯ ಲ್ಲಿಯೇ ಇರಲು ಸೂಚಿಸಲಾಗಿದೆ. ನಗರದಿಂದ ಹೋಗುವ ಮತ್ತು ಇಲ್ಲಿಗೆ ಬರುವ ಶೇ 70ರಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶಾಲೆಗಳ ಮರು ಆರಂಭವನ್ನು ಮುಂದೂಡಲಾಗಿದೆ. ಆದರೆ, ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 24 ಗಂಟೆಗೆ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಹೊಂದಿರುವ ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ … Continue reading ಚೀನಾದ ಚೆಂಗ್ಡುನಲ್ಲಿ ಕಠಿಣ ಲಾಕ್‌ಡೌನ್