ಭಟ್ಕಳ : ಅಂದು ಸಾತ್ವಂತ್ರö್ಯಕ್ಕಾಗಿ ರಾಷ್ಟಿçÃಯ ಏಕತೆಯ ಉದ್ದೇಶದಿಂದ ಆಚರಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದು ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.
ಅವರು ಪಟ್ಟಣದ ಮಣ್ಕುಳಿಯ ಮಿತ್ರಯುವಕ ಮಂಡಳಿ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕçತೀಕ ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಇಂದು ಎಲ್ಲಾ ರಂಗದಲ್ಲೂ ವೇಗವಾಗಿ ಬೆಳೆಯುತ್ತಿದೆ. ನಾವು ರಾಷ್ಟಿçÃಯತೆ ಮೈಗೂಡಿಸಿಕೊಡರೆ ಭಾರತ ವಿಶ್ವಗುರು ಆಗುತ್ತದೆ ಎಂದರು.
ಉಪವಿಭಾಗಾಧಿಕಾರಿ ಮಮತಾ ದೇವಿ ಮಾತನಾಡಿ ಸ್ವಾತಂತ್ರ ವೀರರು ದೇಶವನ್ನು ಒಗ್ಗೂಡಿಸಲು ಆಚರಿಸಿಕೊಂಡು ಬಂದAತಹ ಗಣೇಶೋತ್ಸವ ಇಂದು ಸಂಭ್ರಮ ಸಡಗರದ ಊರ ಹಬ್ಬವಾಗಿದೆ. ಊರಿನ ಎಲ್ಲೆಡೆ ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಭಟ್ಕಳ ಕನ್ನಡ ಸಾಹಿತಿ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಗಣೇಶೋತ್ಸವ ಆಚರಣೆಯ ಮಹತ್ವವನ್ನು ತಿಳಿಸಿದರು.
ಮಣ್ಕುಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ ಮಾತನಾಡಿ ಮಣ್ಕುಳಿಯಲ್ಲಿ ಕಳೆದ 30 ವರ್ಷಗಳಿಂದ ಗಣೇಶೋತ್ಸವ ಸಾಗಿಬಂದ ಹಾದಿಯ ಬಗ್ಗೆ ತಿಳಿಸಿದರು. ಗುರುಕೃಪಾ ಕೋ.ಆಪರೇಟಿವ ಬ್ಯಾಂಕಿನ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿದರು.
ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಉಪವಿಭಾಗಾಧಿಕಾರಿ ಮಮತಾ ದೇವಿ, ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಊರಿನ ದಾನಿಯಾದ ರಾಮಚಂದ್ರ ನಾಯ್ಕ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಕೃಪಾ ಬ್ಯಾಂಕಿನ ಉಪಾಧ್ಯಕ್ಷ ನಾರಾಯಣ ನಾಯ್ಕ, ಗರಡಿಮನೆ ಸಮಿತಿ ಅಧ್ಯಕ್ಷ ಸುರೇಶ ನಾಯ್ಕ ಕೊಣೆಮನೆ, ಮಿತ್ರಯುವಕ ಮಂಡಳಿ ಅಧ್ಯಕ್ಷ ಸತೀಶ ನಾಯ್ಕ, ಊರಿನ ಮುಖಂಡರಾದ ಯೊಗೇಶ ನಾಯ್ಕ, ಉಮೇಶ ನಾಯ್ಕ ನಾಗಪಾತ್ರಿ, ನಾರಾಯಣ ಶೆಟ್ಟಿ, ವೈದಿಕರಾದ ಕೃಷ್ಣ ಭಟ್ ಇದ್ದರು.
Leave a Comment