ಐಟಾ ದಿಂದ ಸೆ.೫ ರಂದು ರಾಜ್ಯಮಟ್ಟದ ಆನ್‌ಲೈನ್ ಶಿಕ್ಷಕ ದಿನಾಚರಣೆ

ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಐಟಾ ಕರ್ನಾಟದ ವತಿಯಿಂದ ಸೆ.೫ ರಂದು ಸೋಮವಾರ ರಾತ್ರಿ ೯ಗಂಟೆಗೆ ರಾಜ್ಯಮಟ್ಟದ “ಆನ್‌ಲೈನ್ ಶಿಕ್ಷಕ ದಿನಾಚರಣೆ-೨೦೨೨” ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಜಿ ಸಚಿವ ಹಾಗೂ ಪ್ರತಿಪಕ್ಷದ ಉಪನಾಯಕ ಯು.ಟಿ.ಕಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಸೆಂಟ್ರಲ್ ಎಜ್ಯುಕೇಶನ್ ಬೋರ್ಡ್ ನಿರ್ದೇಶಕ ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. … Continue reading ಐಟಾ ದಿಂದ ಸೆ.೫ ರಂದು ರಾಜ್ಯಮಟ್ಟದ ಆನ್‌ಲೈನ್ ಶಿಕ್ಷಕ ದಿನಾಚರಣೆ