ಯಲ್ಲಾಪುರ
ತಾಲೂಕಿನ ಡೋಂಗ್ರಿ ಗ್ರಾಮಪಂಚಾತದ ಕನಕನಹಳ್ಳಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ವಿಜಯವಿನಾಯಕ ಯುವಕ ಸಂಘದ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಭಾಕಾರ್ಯಕ್ರಮದಲ್ಲಿ ,ಮುಖ್ಯ ಅತಿಥಿಗಳಾಗಿ ಹಿರಿಯರಾದ ಮಹಾಬಲೇಶ್ವರ ಗಾಂವ್ಕರ್, ಮಂಜುನಾಥ ಭಾಗ್ವತ್ ಉಪಸ್ಥಿತರಿದ್ದರು, ಜನರ್ಧನ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿವಪ್ರಸಾದ ನಾಯ್ಕ ಸ್ವಾಗತಿಸಿದರು,ಗಣೇಶ ಅಭಿನಂದಿಸಿದರು. ನಂತರ ಲಕ್ಷ್ಮೀಕ್ರಪಾ ಮಹಿಳಾಮಂಡಳದಿಂದ ಜನಪದ ನೃತ್ಯ,ಕೋಲಾಟ,ಭರತನಾಟ್ಯ, ಏಕಪಾತ್ರಾಭಿನಯ,ಭಜನೆ,ಶಾಸ್ತ್ರೀಯ ಹಾಗು ಸುಗಮಸಂಗೀತ ಕಾರ್ಯಕ್ರಮ ನಡೆಯಿತು.
ಜನಮನ ರಂಜಿಸಿದ ತ್ರಿಶಂಕು ಸ್ವರ್ಗ ಯಕ್ಷಗಾನ ಃ
ಕನ್ನಡ ಸಂಸ್ಕ್ರತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸಾಂಸ್ಕೃತಿಕ ಕಲಾತಂಡದವರಿಂದ ಭಾಸ್ಕರ ಗಾಂವ್ಕರ್ ಇವರ ನಿರ್ದೇಶನದಲ್ಲಿ ತ್ರಿಶಂಕು ಸ್ವರ್ಗ ಎಂಬ ಪೌರಾಣಿಕ ಯಕ್ಷಗಾನ ಜನಮನಗೆದ್ದಿತು.
Leave a Comment