ಭಟ್ಕಳ – ಕಳೆದ ವರ್ಷ ಫೆಬ್ರುವರಿ 2021 ರಲ್ಲಿ ಶಿರಾಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಪ್ರಮುಖ ಅತ್ಯಾಚಾರಿ ಆರೋಪಿತರಾದ ರವಿ ಶಂಕರ ಪಟಗಾರ ,ಪ್ರಾಯ 25 ವರ್ಷ ವಾಸ: ಹುಲೇಕಲ್ ಗ್ರಾಮ ಅರೇಹುಲೇಕಲ್, ಶಿರಸಿ ಇವನಿಗೆ 3 ವರ್ಷ ಶಿಕ್ಷೆ, 5,000/- ದಂಡ ಮತ್ತು ಇನೊಬ್ಬ ಆರೋಪಿ ಶಿವರಾಜ, ಮಾದೇವ ನಾಯ್ಕ ಪ್ರಾಯ : 22 ವರ್ಷ ಉದ್ಯೋಗ ಹೋಟೆಲ ಕೆಲಸ ಸಾ: ಸೋಮಿಮನೆ, ಗುಡಿಹಿತ್ತಲ್, ಭಟ್ಕಳ ಇವನಿಗೆ 20 ವರ್ಷ ಶಿಕ್ಷೆ, 95,000/-ರೂ ದಂಡ ವಿಧಿಸಿ ಸೆಪ್ಟೆಂಬರ್ 6 ರಂದು ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಎ.ಎಸ್.ಐ ಕೃಷ್ಣಾನಂದ ನಾಯ್ಕ ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ದಿವಾಕರ, ಪಿ.ಎಂ ಸಿ.ಪಿ.ಐ ಭಟ್ಕಳ ಹಾಲಿ ಪೊಲೀಸ ನಿರೀಕ್ಷಕರು ಭಟ್ಕಳ ಶಹರ ಪೊಲೀಸ ಠಾಣೆ ರವರು ತನಿಖೆ ಕೈಗೊಂಡು ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-I ) ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರಲ್ಲಿ ಸಲ್ಲಿಸಿದ್ದು ಸದರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ದಿನಾಂಕ 06/09/2022 ರಂದು 2 ಜನ ಆರೋಪಿತರಾದ 1 ನೆ ಆರೋಪಿ ರವಿ ಶಂಕರ ಪಟಗಾರ ವಾಸ: ಹುಲೇಕಲ್ ಗ್ರಾಮ ಅರೇಹುಲೇಕಲ್, ಶಿರಸಿ ಇವರಿಗೆ (3 ವರ್ಷ ಶಿಕ್ಷೆ, 5,000/- ದಂಡ ) ಹಾಗೂ 2 ನೇ ಆರೋಪಿತನಾದ ಶಿವರಾಜ, ಮಾದೇವ ನಾಯ್ಕ ಪ್ರಾಯ : 22 ವರ್ಷ ಉದ್ಯೋಗ ಹೋಟೆಲ ಕೆಲಸ ಸಾ: ಸೋಮಿಮನೆ, ಗುಡಿಹಿತ್ತಲ್, ಭಟ್ಕಳ ಇವರಿಗೆ ( 20 ವರ್ಷ ಶಿಕ್ಷೆ 95,000/-ರೂ ದಂಡ) ವಿಧಿಸಿ ಮಾನ್ಯ ನ್ಯಾಯಾಧಿಶರಾದ ಶ್ರೀ ಶಿವಾಜಿ ಅನಂತ ನಲ್ವಡೆ ರವರು ತಿರ್ಪ ನೀಡಿರುತ್ತಾರೆ.
ಈ ಪ್ರಕಣದಲ್ಲಿ ತನಿಖಾಧಿಕಾರಿಯಾಗಿ ದಿವಾಕರ, ಪಿ.ಎಂ ಸಿ.ಪಿ.ಐ ಭಟ್ಕಳ ಹಾಲಿ ಪೊಲೀಸ ನಿರೀಕ್ಷಕರು ಭಟ್ಕಳ ಶಹರ ಪೊಲೀಸ ಠಾಣೆ ಹಾಗೂ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಶೋಭಾ ಗಾಂವಕರ ವಾದ ಮಂಡಿಸಿದ್ದು ಇರುತ್ತದೆ. ಮತ್ತು ಈ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ದೀಪಕ ಸದಾನಂದ ನಾಯ್ಕ ಹೆಡ್ ಕಾನಸ್ಟೇಬಲ್ ಭಟ್ಕಳ, ಗ್ರಾಮೀಣ ಠಾಣಿ ರವರು ಹಾಗೂ ಕೋರ್ಟ ಮಾನಿಟರಿಂಗ ಕರ್ತವ್ಯವನ್ನು ಕಜ್ಜಿದೊಣಿ, ಸಮನ್ವ/ವಾರೆಂಟ ಜಾರಿಕಾರರಾಗಿ ನಾರಾಯಣ ಗೌಡ ಮತ್ತು ಯಾಕೂಬ್ ಮೊಗಲ ರವರ ಕಾರ್ಯ ನಿರ್ವಹಿಸಿದ್ದು ಇರುತ್ತದೆ.
Leave a Comment