ಕಾರವಾರ : ತಾಲೂಕಿನ ಕೋಡಾರ್ ನೌಕಾನೆಲೆ ನಿರ್ಬಂಧಿತ ಪ್ರದೇಶಕ್ಕೆ ಯಾರೋ ನಾಲ್ವರು ಅಪರಿಚಿತರು ಪ್ರವೇಶಿಸಿ ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನೌಕಾಧಿಕಾರಿಗಳು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೋಡಾರ್ ನೌಕಾನೆಲೆ ವ್ಯಾಪ್ತಿಯ ಸಾರ್ವಜನಿಕ ನಿರ್ಬಂಧಿತ ಪ್ರದೇಶವಾಗಿದ್ದು, ಇತ್ತೀಚೆಗೆ ಯಾರೋ ಅಪರಿಚಿತ ನಾಲ್ವರು ಅಲ್ಲಿಗೆ ಪ್ರವೇಶಿಸಿರುವುದು ನೌಕಾನೆಲೆಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ನೌಕಾ ಅಧಿಕಾರಿಗಳು ಹಾಗೂ ಕರಾವಳಿ ಕಾವಲು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರೂ ಅಪರಿಚಿತರ ಸುಳಿವು ಸಿಕ್ಕಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಪರಿಚಿತರನ್ನು ಪತ್ತೆ ಹಚ್ಚುವಂತೆ ನೌಕಾನೆಲೆಯ ಕಮಾಂಡಿಂಗ್ ಆಫೀಸರ್ ಅಶುತೋಶ್ ತಿವಾರಿ ಪೊಲೀಸ್ ದೂರು ದಾಖಲಿಸಿದ್ದಾರೆ.
Leave a Comment