ಸಿದ್ದಾಪುರ: ತಾಲೂಕಿನ ಹುಕ್ಕಳಿ ಗ್ರಾಮದ ಹುಂಡಿಗದ್ದೆ ಜಲಪಾತ ವೀಕ್ಷಣೆಗೆಂದು ಎಂದ ಪ್ರವಾಸಿಗಳ ತಂಡದ ರಾಘವೇಂದ್ರ ಎಂಬಾತ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದು, ರವಿವಾರ ಅವರ ಶವ ಪತ್ತೆಯಾಗಿದೆ.
ಬೆಂಗಳೂರು, ಕೋಲಾರ ಮೂಲದ 13-14 ಜನ ಪ್ರವಾಸಿಗರು ಶನಿವಾರ ಬಂದಿದ್ದರು. ಅದರಲ್ಲಿ ಏರ್ಟೆಲ್ ಕಂಪನಿಯ ಉದ್ಯೋಗಿ ಕೋಲಾರ ಮೂಲದ ರಾಘವೇಂದ್ರ ವೆಂಕಟೇಶಪ್ಪ ಗೌಡ (32) ಇವರು ಕಾಲುಜಾರಿ ಜಲಪಾತದಲ್ಲಿ ಬಿದ್ದು ನೀರುಪಾಲಾಗಿದ್ದರು.
ಶವದ ಪತ್ತೆ ಕಾರ್ಯ ನಡೆಸಿದ ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಸಾರ್ವಜನಿಕರ ಪ್ರಯತ್ನದಿಂದ ಮೃತ ವ್ಯಕ್ತಿಯ ಶವ ಪತ್ತೆಯಾಗಿದ್ದಾಗಿ ಹೇಳಲಾಗಿದೆ.
Leave a Comment