ಭಟ್ಕಳ: ಶಿವಕೃಪ ಲಾಡ್ಜವೊಂದರಲ್ಲಿ ವೇಷ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಇಬ್ಬರ ಬಂಧನ ಮಾಡಿದ್ದು ಓರ್ವ ಪರಾರಿಯಾಗಿರುವ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ನಾಗರಾಜ ಮಂಜುನಾಥ ಮೊಗೇರ ಇನ್ನೋರ್ವ ಮಯೂರ ಎಂದು ತಿಳಿದು ಬಂದಿದೆ. ಪರಾರಿಯಾದ ಆರೋಪಿಯನ್ನು ಶಿವಪ್ರಸಾದ್ ರಾವ್ ಎಂದು ತಿಳಿದು ಬಂದಿದೆ.
ಇವರು ತಮ್ಮ ಲಾಭಗೊಸ್ಕರ ನೊಂದ ಮಹಿಳೆಯರನ್ನು ಕರೆಸಿ ಮುರುಡೇಶ್ವರ ಶಿವಕೃಪ ಲಾಡ್ಜನಲ್ಲಿ ಇರಿಸಿ ಗಿರಾಕಿಗಳಿಂದ ಬಂದ ಹಣವನ್ನು ಪಡೆದುಕೊಂಡು ಮಹಿಳೆಯರನ್ನು ಲೈಂಗಿಕ ಶೋಷಣೆ ಒಳಪಡಿಸಿದ್ದು. ಈ ವೇಳೆ ದಾಳಿ ನಡೆಸಿ
ಇಬ್ಬರು ಮಹಿಳೆಯರನ್ನು ರಕ್ಷೆಣೆ ಮಾಡಿದ್ದಾರೆ. ಮಹಿಳೆಯರಲ್ಲಿ ಓರ್ವ ಮಹಿಳೆ ಹಾಸನ, ಇನ್ನೋರ್ವ ಮಹಿಳೆ ಬೆಂಗಳೂರು ಮೂಲದವರಾಗಿದ್ದಾರೆ.
ಈ ಬಗ್ಗೆ ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Leave a Comment