ಹೊನ್ನಾವರ : ರೈಲ್ವೇ ನಿಲ್ದಾಣದ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕರ್ಕಿ ರೈಲ್ವೇ ನಿಲ್ದಾಣದ ಸಮೀಪ ಹೊನ್ನಾವರದ ನಾಗರಾಜ ಆಚಾರ್ಯ, ಕಾಸರಕೋಡದ ಸಮೀರ್ ಶೇಖ್ ಎನ್ನುವವರು 15 ಸಾವಿರ ಮೌಲ್ಯದ 530 ಗ್ರಾಂ ಗಾಂಜಾ ಇಟ್ಟುಕೊಂಡು ಅದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು.
ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮಾಲು ಸಹಿತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ಶ್ರೀಧರ ಎಸ್. ಆರ್. ಮಾರ್ಗದರ್ಶನದಲ್ಲಿ ಪಿಎಸೈ ಮಹಾಂತೇಶ ನಾಯಕ ನೇತ್ರತ್ವದಲ್ಲಿ, ಸಿಬ್ಬಂದಿ ಮಹಾವೀರ, ಶ್ರೀಶೈಲ, ಸಂತೋಷ, ಸತೀಶ ಭಟ್ ಮತ್ತಿತರರು ಕಾರ್ಯಚರಣೆ ನಡೆಸಿದ್ದರು.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆದೆ.
Leave a Comment