ಅಂಕೋಲಾ : ಮಾರಾಟ ಮಾಡುವ ಸಲುವಾಗಿ ಮನೆಯಂಗಳದಲ್ಲಿ ಕೂಡಿಟ್ಟ ಅಂದಾಜು ರೂ . 60 ಸಾವಿರ ಮೌಲ್ಯದ ಸುಮಾರು 120 ಕೆಜಿ ಅಡಿಕೆಯನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿಯಲ್ಲಿ ನಡೆದಿದೆ .
ಈ ಕುರಿತು ಮಹಾಬಲೇಶ್ವರ ನರಸಿಂಹ ಭಟ್ ಕನಕನಹಳ್ಳಿ ಇವರು ದೂರು ನೀಡಿದ್ದು ಇವರ ಮನೆಯಂಗಳದಲ್ಲಿ ಅಡಿಕೆಯನ್ನು ಒಣಗಿಸಿ ಮಾರಾಟ ಮಾಡುವ ಸಲುವಾಗಿ ಚೀಲಗಳಲ್ಲಿ ತುಂಬಿಡಲಾಗಿತ್ತು .
ಈ ಪೈಕಿ 60 ಕೆಜಿಯ ಎರಡು ಅಡಿಕೆ ಚೀಲಗಳನ್ನು ಬುಧವಾರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕದ್ದೊಯ್ದಿದ್ದಾರೆ . ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಳುವಿನ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ .
Leave a Comment