ಬೆಂಗಳೂರು: ತಾನು ಮದುವೆಯಾಗಬೇಕಿದ್ದ ಯುವತಿಯ ಅಶ್ಲೀಲ ಪೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಹಾಕಿದ್ದ ವೈದ್ಯನನ್ನು ಆ ಯುವತಿಯೇ ಸ್ನೇಹಿತರ ಜತೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ದುರಂತ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೈದ್ಯ ವಿಕಾಸ್ (27) ಕೊಲೆಯಾದವರು. ಪ್ರಕರಣ ಸಂಬಂಧ ವಿಕಾಸ್ ಮದುವೆಯಾಗಬೇಕಿದ್ದ ಪ್ರತಿಭಾ ಹಾಗೂ ಆಕೆಯ ಸ್ನೇಹಿತರಾದ ಗೌತಮ್, ಸುಶೀಲ್ ಹಾಗೂ ಸೂರ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಕಾಸ್ ಮತ್ತು ಪ್ರತಿಭಾ ಪ್ರೀತಿಸುತ್ತಿದ್ದು, ಇಬ್ಬರೂ ಮದುವೆ ಯಾಗಲು ನಿರ್ಧರಿಸಿದ್ದರು. ಹೀಗಾಗಿ ಇಬ್ಬರೂ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಈ ವೇಳೆ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದ ವಿಕಾಸ್ ಅವುಗಳನ್ನು ತನ್ನ ಲ್ಯಾಪ್ಟಾಪ್ಗೆ ಹಾಕಿಕೊಂಡಿದ್ದ. ಇದನ್ನು ನೋಡಿದ ಪ್ರತಿಭಾ ಜಗಳವಾಡಿದ್ದಳು. ಕೂಡಲೇ ಅವುಗಳನ್ನು ಡಿಲೀಟ್ ಮಾಡುವಂತೆ ತಾಕೀತು ಮಾಡಿದ್ದಳು. ಆದರೂ ಕೇಳದ ವಿಕಾಸ್ ಅವುಗಳನ್ನು ಇನ್ಸ್ಟಾಗ್ರಾಮ್ಗೆ ಅಪ್ಲೋಡ್ ಮಾಡಿದ್ದ.
ಇದರಿಂದ ಆಕ್ರೋಶಗೊಂಡಿದ್ದ ಪ್ರತಿಭಾ ಸೆ.10 ರಂದು ಸ್ನೇಹಿತರಾದ ಸುಶೀಲ್, ಸೂರ್ಯ ಹಾಗೂ ಗೌತಮ್ ಜತೆ ಬಂದು ವಿಕಾಸ್ ಜತೆ ಜಗಳ ತೆಗೆದು ತಲೆಗೆ ಹೊಡೆದಿದ್ದರು. ಇದರಿಂದ ಗಾಯಗೊಂಡ ವಿಕಾಸ್ನನ್ನು ಅವರೇ ಆಸ್ಪತ್ರೆಗೆ ಸೇರಿಸಿ ಆತನ ಪೋಷಕರಿಗೆ ಮಾಹಿತಿ ನೀಡಿದ್ದರು. ಆದರೆ, ವಿಕಾಸ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
#Honnavara# ಗೋವಿನ ಹೆಸರಿನಲ್ಲೂ ನಡೆಯುತ್ತಿದೆಯಾ ಭ್ರಷ್ಟಾಚಾರ??
Leave a Comment