ಭಟ್ಕಳ- ಭಟ್ಕಳದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕರೆದ ನೆರೆ ಪರಿಹಾರ ವಿತರಣೆ ಪ್ರಗತಿ ವೀಕ್ಷಣೆ ಸಭೆಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರು ಪ್ರಾಮಾಣಿಕವಾಗಿ , ಕಾನೂನು ಭದ್ದವಾಗಿ ತನ್ನ ಕಾರ್ಯ ನಿರ್ವಹಿಸಿದ ತಹಸೀಲ್ದಾರ್ ಸುಮಂತ ಅವರಿಗೆ ಸಚಿವರ ಎದುರು ನನ್ನ ಫೋನ್ ಕರೆಗೆ ಯಾಕೆ ಬೆಲೆ ಕೊಡುತ್ತಿಲ್ಲ, ನಾನು ಹೇಳಿದ ಕೆಲಸ ಯಾಕೆ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡು ಗದರಿಸಿದರು.
ನಂತರ ನಯವಾಗಿ ಶಾಸಕ ಸುನೀಲ್ ನಾಯ್ಕ್ ಅವರಿಗೆ ಉತ್ತರಿಸಿದ ತಹಸೀಲ್ದಾರರು ನೀವು ಹೇಳಿದ ಕೆಲಸ ಮಾಡಲು ಕಾನೂನಿನ ತೊಡಕು ಇದೆ , ಕಾನೂನನ್ನು ಮೀರಿ ನೀವು ಹೇಳಿದ ಕೇಲಸ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಭಟ್ಕಳದಲ್ಲಿ ಸುರಿದ ಬಾರಿ ಅತಿವೃಷ್ಟಿಯ ಕಾರಣ ಕೊಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದು, ನಷ್ಟ ಅನುಭವಿಸಿದ ಪ್ರತಿಯೊಬ್ಬರಿಗೂ ಕರ್ನಾಟಕ ಸರಕಾರ ನಷ್ಟ ಪರಿಹಾರದ ಬರವಸೆಯನ್ನು ನಿಡಿತ್ತು ,ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯಾವ ಪ್ರಮಾಣದಲ್ಲಿ ನಷ್ಟ ಪರಿಹಾರ ನಡೆಯುತ್ತಿದೆ ಎಂಬುವುದರ ಅವಲೋಕನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಟ್ಕಳ ತಾಲೂಕಾಡಳಿತದ ಜೊತೆ ನಡೆಸಿದರು.
ಈ ಸಂದರ್ಬದಲ್ಲಿ ಅವರು ಬಡ ಅಮಾಯಕರಿಗೆ ನಷ್ಟ ಪರಿಹಾರವನ್ನು ಒದಗಿಸುವ ಕೆಲಸ ಮಾಡಿ ಸರಕಾರ ನಿಮ್ಮೊಂದಿಗಿದೆ ನಾನು ಇಲ್ಲಿ ರಾಜಿ ಪಂಚಾಯತಿಯನ್ನು ಮಾಡಲು ಬಂದಿಲ್ಲಾ ನಷ್ಟ ಪರಿಹಾರವನ್ನು ಸರಿಯಾಗಿ ಮಾಡಿ ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯ ನಂತರ ಕೆಲವು ವ್ಯಕ್ತಿಗಳು ತಮಗೆ ಕಲ್ಲು ಕ್ವಾರಿ ನಡೆಸಲು ಸಹಕರಿಸ ಬೇಕು ಎಂದು ವಿನಂತಿಸಿಕೊಂಡರು
ಈ ಸಂದರ್ಬದಲ್ಲಿ ಸಹಾಯಕ ಆಯುಕ್ತರಾದ ಮಮತಾ ದೇವಿ, ತಾಲೂಕ ತಹಶಿಲ್ದಾರರಾದ ಸುಮಂತ ಬಿ , ಹಾಗು ತಾಲೂಕ ಮಟ್ಟದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment