ಒಮ್ಮೆ ನರಮಂಡಲವನ್ನು ಆಕ್ರಮಿಸಿದರೆ, ಗುಣಪಡಿಸಲು ಅಸಾಧ್ಯವೆಂದೇ ನಂಬಲಾಗಿದ್ದ ರೇಬಿಸ್ ಅಥವಾ ಹೈಡೋಫೋಬಿಯ (ಜಲಭೀತಿ) ರೋಗವನ್ನು ಸೇನಾಪಡೆ, ರಕ್ಷಣಾಪಡೆಗಳ ವೈದ್ಯಕೀಯ ವಿದ್ಯಾಲಯದ ವೈದ್ಯರು, ಮತ್ತು ನಿಮ್ಹಾನ್ಸ್ ತಜ್ಞರ ತಂಡ ಸತತ ಪ್ರಯತ್ನದಿಂದ ಗುಣಪಡಿಸಿ ವೈದ್ಯಕೀಯದಲ್ಲೊಂದು ಹೊಸ ಬೆಳಕು ಮೂಡಿಸಿದ್ದಾರೆ.
2015 ರ ಮೇ ತಿಂಗಳಲ್ಲಿ ಹುಚ್ಚುನಾಯಿ ಕಡಿತದಿಂದ ಕೋಮಾಹಂತ ತಲುಪಿದ್ದ ಹದಿನಾರು ವರ್ಷದ ಹೀರಾ ಸಿಂಗ್ ಎಂಬ ಯುವಕನನ್ನು ಸತತ ಚಿಕಿತ್ಸೆಯಿಂದ ಚ೦ಡಿ ಘಡದ ಸೇನಾ ಆಸ್ಪತ್ರೆಯಲ್ಲಿ ಬದುಕಿಸಲಾಗಿದೆ. 2004ರಲ್ಲಿ ಜೇನಾ ಗಾಯ್ ಎಂಬವರನ್ನು ರೇಬಿಸ್ನಿಂದ ಬದುಕುಳಿದ ಮೊದಲ ವ್ಯಕ್ತಿ ಎಂದು ಗುರುತಿಸಲಾಗಿದೆ. ರೇಬೀಸ್ ಆಕ್ರಮಣಗೊಂಡ ನಂತರ ಇದುವರೆಗೆ 14 ಜನರನ್ನು ಬದುಕಿಸಲಾಗಿದೆ. ಈ ಸಂಶೋಧನೆಯು ಮುಂದುವರಿದಲ್ಲಿ, ಜನಸಾಮಾನ್ಯರಿಗೂ ಅದರ ಉಪಯೋಗ ಬರುವ ಸಾಧ್ಯತೆ ಇದೆ.
ರೇಬೀಸ್ ತಡೆಯಲು ಲಸಿಕೆ ಪರಿಣಾಮಕಾರಿ. ಅಕಸ್ಮಾತ್ ರೇಬೀಸ್ ಮಿದುಳನ್ನು ಆಕ್ರಮಿಸಿದ ನ೦ತರ, ಗುಣಪಡಿಸಲು ಸಾಧ್ಯವಾಗದು ಎಂದೇ ತಿಳಿಯಲಾಗಿದೆ. ಆದರೂ, ಈ ನಿಟ್ಟಿನಲ್ಲಿ ಹೊಸ ಸಂಶೋಧನೆಗಳಾಗುತ್ತಿದ್ದು, ಇದುವರೆಗೆ ಜಗತ್ತಿನಲ್ಲಿ ರೇಬೀಸ್ ತಗುಲಿದ 14 ಜನರನ್ನು ಬದುಕಿಸಲಾಗಿದೆ!
ವಿಶ್ವದಾದ್ಯಂತ ಜಾಗೃತಿ
ಪ್ರತಿ ವರ್ಷ ರೇಬೀಸ್ ನಿಂದಾಗಿ 55,00 ರಿಂದ 60,000 ಜನರ ಸಾವು, ಆಸ್ಟ್ರೇಯ ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಶೇಕಡಾ 95 ಕ್ಕೂ ಹೆಚ್ಚು ಜನರ ಸಾವು, ಭಾರತದಲ್ಲಿ ವರ್ಷಕ್ಕೆ 20,000ಕ್ಕೂ ಹೆಚ್ಚು ಬಲಿ, ಬೀದಿನಾಯಿಗಳ ಕಾಟದಿಂದಾಗಿ ಈ ಸಂಖ್ಯೆ ಹೆಚ್ಚಳ, ಜಪಾನ್, ಸಿ೦ಗಪೂರ್ಣ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ರ್ಸಿಟರೆಂಡ್, ಫಿಜಿ, ಡೆನ್ಮಾರ್ಕ್, ನೆದರಲೆಂಡ್, ಮಲೇಶಿಯಾ, ಮಾರೀಷಸ್, ಫಿಫ್ರೆಂಡ್, ಪೋರ್ಚುಗಲ್ ಈಗಾಗಲೇ ರೇಬೀಸ್ ಮುಕ್ತ ರಾಷ್ಟ್ರಗಳೆಂದು ಘೋಷಿಸಲ್ಪಟ್ಟಿದ್ದು ಇನ್ನೂ ಹಲವು ರಾಷ್ಟ್ರಗಳು ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.
(ಜಲಭೀತಿ) ಮತ್ತು ಪ್ರಾಣಿಗಳಲ್ಲಿ ಹುಚ್ಚುನಾಯಿ ರೋಗ ಎಂದು ಕರೆಯಲ್ಪಡುವ ಈ ರೋಗ ಲ್ಯಾಬೊ ವೈರಿಡೇ ಕುಟುಂಬಕ್ಕೆ ಸೇರಿದ ಲಿಸ್ಸಾವೈರಸ್ ಎ೦ಬ ಸೂಕ್ಷ್ಮಾಣುವಿನಿಂದ ಲೈ (95%), ಬಾವಲಿ, ನರಿ, ತೋಳ, ರನ್ (ಒಟ್ಟು 4) ಮೊದಲಾದ ಪ್ರಾಣಿಗಳ ದೇಹದಲ್ಲಿ ರೋಗಪೀಡಿತ ಸ್ಥಿತಿಯಲ್ಲಿ ಕ೦ಡುಬರುವ ಈ ವೈರಸ್ ಈ ಪ್ರಾಣಿಗಳ ಕಡಿತದಿಂದ (ಕೆಲವೊಮ್ಮೆ ಪರಚುವಿಕೆ ಅಥವಾ ನೆಕ್ಕುವಿಕೆಯಿಂದ) ಜೊಲ್ಲಿನಲ್ಲಿರುವ ರೋಗಾಣುಗಳು ಮನುಷ್ಯನಿಗೆ ಅಥವಾ ಇತರೆ ಪ್ರಾಣಿಗಳ ದೇಹಕ್ಕೆ ವರ್ಗಾವಣೆಗೊಂಡು ರೋಗಹರಡಲು ಸಹಕಾರಿಯಾಗುತ್ತದೆ.
ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆ ಹಾಗೂ ಚಿಕಿತ್ಸೆ ನೀಡಿದಲ್ಲಿ ಬದುಕುಳಿಯುವ ಸಾಧ್ಯತೆ ಹೆಚ್ಚು ಪ್ರಾಣಾಂತಿಕವಾಗುವ ಈ ರೋಗವನ್ನು ನೂರಕ್ಕೆ ನೂರು ತಡೆಗಟ್ಟಲು ಸಾಧ್ಯ
ರೋಗಲಕ್ಷಣಗಳು
ಆರಂಭದಲ್ಲಿ ಸಾಮಾನ್ಯ ಸ್ಪೂ ಜ್ವರದಂತೆ ಕಾಣಿಸಿಕೊಂಡು ಸತತ ಎರಡರಿಂದ ಎಂಟು ವಾರಗಳವರೆಗೆ ನರಳುವಿಕೆ ಮು೦ದುವರೆಯಬಹುದು. ಈ ರೋಗಾಣುಗಳು ಮುಖ್ಯವಾಗಿ ಮೆದುಳುಬಳ್ಳಿಯನ್ನು ತಲುಪಿ ಅಲ್ಲಿಂದ ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುವುದರಿಂದ ರೋಗ ಪೀಡಿತ ಪ್ರಾಣಿ ಕಚ್ಚಿದ ಜಾಗ ಈ ಮೆದುಳುಬಳ್ಳಿಯಿಂದ ಎಷ್ಟು ದೂರವಿದೆ ಮತ್ತು ಕಡಿತದಿಂದ ಆಗಿರುವ ಗಾಯದ ಆಳ ಹಾಗು ರಕ್ತದೊಂದಿಗೆ ಜೊಲ್ಲಿನಲ್ಲಿರುವ ರೋಗಾಣು ಮಿಶ್ರಣಗೊಂಡು ಎಷ್ಟುಬೇಗ ಮೆದುಳನ್ನು ತಲುಪುತ್ತದೆ ಎಂಬುದರ ಆಧಾರದ ಮೇಲೆ ಈ ರೋಗದ ತೀವ್ರತೆ ನಿರ್ಧಾರಗೊಳ್ಳಲಿದೆ.
ಜ್ವರ, ನರಳುವಿಕೆ, ಪಾರ್ಶ್ವವಾತ, ಅಚಟುವಟಿಕೆ, ಉದ್ವೇಗ, ಕೆಸಿಎಸಿ, ಪ್ರತಿಭಟಿಸುವ, ಧಾಳಿಮಾಡುವ ಅಥವಾ ಗುರುಗುಟ್ಟುವ ಲಕ್ಷಣಗಳು, ಮರೆಗುಳಿತನ, ಅತಿಭೀತಿ, ಜಲಭೀತಿ, ಅಸ್ವಾಭಾವಿಕ ನಡುವಳಿಕೆಗಳಿಂದ ವ್ಯಕ್ತಿ ನರಳಬಹುದು. ತಿವ್ರ ರೋಗಲಕ್ಷಣ ಕಾಣಿಸಿಕೊಂಡ ಎರಡರಿಂದ ಹತ್ತು ದಿನಗಳೊಳಗಾಗಿ ರೋಗಿ ಸಾವನ್ನಪಬಹುದು. ನೀರನ್ನು ನೋಡಿದರೆ ಹೆದರುವ ಪ್ರವೃತ್ತಿಯಿಂದಾಗಿ ಜಲಭೀತಿ ಎಂದು ಕರೆಯಲ್ಪಡುವ ಈ ರೋಗಪೀಡಿತ ವ್ಯಕ್ತಿ ಅಥವಾ ಪ್ರಾಣಿಗಳಿಗೆ ನೀರನ್ನೂ ಕೂಡ ನುಂಗಲಿಕ್ಕೆ ಸಾಧ್ಯವಾಗದೇ ಅತಿಯಾದ ನೋವಿನಿಂದ ನರಳುವುದೇ ಈ ಭೀತಿಗೆ ಕಾರಣವೆಂದು ಕಂಡುಬಂದಿದೆ.
Leave a Comment