ಹೊನ್ನಾವರ : ಕಳೆದ ಐದು ವರ್ಷಗಳ ಹಿಂದೆ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದನೆನ್ನಲಾಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಅಂತೂ ಬಿ ರಿಪೋರ್ಟ್ ಸಲ್ಲಿಸಿದೆ!
2017ರ ಡಿಸೆಂಬರ್ 6 ರಂದು ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಯುವಕನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದ್ದರು. ಮೇಸ್ತಾನನ್ನು ಜಿಜೆಪಿ ಹಾಗೂ ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿAದ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.
ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಅಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಪ್ರಕರಣದಲ್ಲಿ ಸಿಬಿಐಗೆ ವಹಿಸಿತ್ತು. ಐವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ವಿಸ್ತೃತ ನಾಲ್ಕೂವರೆ ವರ್ಷದ ನಂತರ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ. ಇದೊಂದು ಆಕಸ್ಮಿಕ ಸಾವು ಎಂದು ಅಭಿಪ್ರಾಯಿಸಲಾಗಿದೆ.
ಸೋಮವಾರ ಸಿಬಿಐ ಸಲ್ಲಿಸಿರುವ ವರದಿ ಪರಿಶೀಲಿಸಿದ ಸ್ಥಳೀಯ ನ್ಯಾಯಾಲಯ, ನವೆಂಬರ್ 16 ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ. ಈ ಮೂಲಕ ಹತ್ಯೆ ಎಂದು ಬೆಂಬಿಸಿ ರಾಜಕೀಯ ಲಾಭ ಪಡೆದಿದ್ದ ಬಿಜೆಪಿಗೆ ಭಾರೀ ಮುಖಭಂಗವಾದAತಾಗಿದೆ.
ಹೊನ್ನಾವರ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ. ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿಯ ಮುಖಕ್ಕೆ ಬಡಿದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜೆಪಿ ನಾಯಕರೇ, ನಿವೂ ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊAಡಿದೆ.
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ
ಜಾರಿಗೆ ತಂದ ಯೋಜೆಗಳು ಹಾಗೂ ಜನಸೇವೆಯನ್ನು ಮುಂದಿಟ್ಟುಕೊAಡು ರಾಜಕಾರಣ ಮಾಡಬೇಕೆ ಹೊರತು, ಅಮಾಯಕರ ಸಾವನ್ನು ಕೋಮುಗಲಭೆಯಾಗಿ ಪರಿವರ್ತಿಸಿ ರಾಜಕಾರಣ ಮಾಡಬಾರದು. ಬಿಜೆಪಿಗರು ಸಹಜ ಸಾವನ್ನು ಕೋಮು ಗಲಭೆಯಾಗಿ ಪರಿವರ್ತಿಸಿ 2018ರ ಚುನಾವಣೆಯನ್ನು ಗೆದ್ದಿದ್ದಾರೆ. ಆದರೆ ಈಗ ಜಿಲ್ಲೆಯ ಜನರಿಗೆ ಸತ್ಯ ತಿಳಿದಿದೆ. ಈ ಸತ್ಯಾಂಶದಿAದ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಯಲಿದೆ.
ಸತೀಶ್ ಸೈಲ್, ಕಾರವಾರ ಕ್ಷೇತ್ರದ ಮಾಜಿ ಶಾಸಕ
ಸಿಬಿಐ ನೀಡಿದ ವರದಿ ನನಗೆ ಅಸಮಾಧಾನವಿದೆ: ಕಮಲಾಕರ ಮೇಸ್ತಾ
ನನ್ನ ಮಗನ ಸಾವಿನ ಬಗ್ಗೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೆಸ್ತಾ ತಿಳಿಸಿದ್ದಾರೆ. ‘ನುಡಿಜೇನು’ ಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಬಿಐನವರು ನನ್ನ ಮಗನ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಸಲು ನನಗೆ ಕುಮಟಾದ ಐಬಿಗೆ ಕರೆಸಿ ಮಾಹಿತಿ ನೀಡಿದ್ದು, ತಮ್ಮ ವರದಿಗೆ
ನನ್ನಗೆ ಸಹಿ ಹಾಕಲು ತಿಳಿಸಿದಾಗ ನಾನು ಒಪ್ಪಲಿಲ್ಲ. ಅದಕ್ಕಾಗಿ ನನ್ನ ಮನೆಗೆ ಪೋಸ್ಟ್ ಮೂಲಕ ವರದಿಯನ್ನ ಕಳುಹಿಸಿದ್ದಾರೆ ಎಂದಿದ್ದಾರೆ. ನನಗೆ ಪೊಲೀಸರು ತನೀಕೆ ಮೇಲೂ ಅಸಮಾಧಾನವಿತ್ತು.
ಈಗ ಸಿಬಿಐ ನೀಡಿದ ವರದಿ ಸಹ ಅಸಮಾಧಾನ ತಂದಿದೆ. ಸಿಬಿಐ ನವರು ಕಳಸಿದ ವರದಿಯನ್ನ ಇನ್ನೂ ತೆರೆಯದೇ ಹಾಗೇ ಇಟ್ಟದ್ದು, ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಲ್ಲರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳದ್ದಾರೆ.
ಸಿಬಿಐ ಹೇಳಿರುವುದೇನು
ಪಪೇಶ್ ಮೇಸ್ತಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಆರೋಪಿಗಳ ಒಳಗೊಳ್ಳುವಿಕೆಯನ್ನು ತೋರಿಸುವ ಯಾವುದೇ ದೋಷಾರೋಪಣೆಯ ಪುರಾವೆಗಳು ಗೋಚರಿಸಿಲ್ಲ.
ಅನೇಕ ಸಂಸ್ಥೆಗಳಿAದ ಸಂಗ್ರಹಿಸಲಾದ ವೈದ್ಯಕೀಯ ಕಾನೂನು ಪುರಾವೆಗಳು/ಅಭಿಪ್ರಾಯವು ಪರೇಶ್ ಮೇಸ್ತಾ ಸಾವಿನ ಕಾರಣವನ್ನು ಮರಣೋತ್ತರ ಮುಳುಗುವಿಕೆ ಎಂದು ಸ್ಪಷ್ಟವಾಗಿಸಿದೆ. ಅದರಂತೆ ಅಂತಿಕ ವರದಿಯನ್ನು ಪ್ರಧಾಮ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಜೂನಿಯರ್ ಡಿಎನ್) & ಜೆಎಂಎಫ್‌ಸಿ ಹೊನ್ನಾವರಕ್ಕೆ ಸಲ್ಲಿಸುತ್ತಿದ್ದೇವೆ.
Leave a Comment