ಹಳಿಯಾಳ : ದಿನಾಂಕ 06-12-2017 ರಂದು ಸಾವಿಗೀಡಾಗಿದ್ದ ಪರೇಶ ಮೇಸ್ತಾ ಸಾವಿನ ತನಿಖೆಯನ್ನು ಮಾಡಿದ ಸಿ.ಬಿ.ಐ, ಇದು ಸಾಮಾನ್ಯ ಮುಳುಗುವಿಕೆಯಿಂದ ಆದ ಸಾವು ಯಾವುದೇ ಕಿರುಕುಳವಾಗಿಲ್ಲ ಎಂದು ನೀಡಿದ ವರದಿ ಸತ್ಯಕ್ಕೆ ಸಂದ ಜಯವಾಗಿದೆ .
ಎಂದು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದ ಮಾಜಿ ಮಂತ್ರಿ ಹಾಗೂ ಹಳಿಯಾಳ ಜೋಯಿಡಾ ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು. ಈ ಸಾವು ಆದಾಗ ನಾನು ರಾತ್ರೋರಾತ್ರಿ ಗೋವಾ ಮೂಲಕ ಹೊನ್ನಾವರ ತಲುಪಿದ್ದನ್ನು ವಿವರಿಸಿದರು. ಪರೇಶ್ ಮೆಸ್ತ ಒಬ್ಬ ಹಿಂದೂ ಕಾರ್ಯಕರ್ತನಾಗಿದ್ದು ಅವನನ್ನು ಅನ್ಯಧರ್ಮೀಯರು ಚಿತ್ರಹಿಂಸೆ ಮಾಡಿ ಕೊಂದಿದ್ದಾರೆ ಎಂದು ಬಿಜೆಪಿ ಮತ್ತು ಹಲವು ಹಿಂದೂ ಪರ ಸಂಘಟನೆಗಳು ಆರೋಪವನ್ನು ಮಾಡಿ ಕರಾವಳಿ ಪ್ರದೇಶದಲ್ಲಿ ಅರಾಜಕತೆಯನ್ನು ಉಂಟುಮಾಡಿ ಕಾನೂನು-ಸುವ್ಯವಸ್ಥೆಗೆ ಭಂಗವನ್ನು ತಂದಿದ್ದರು.
ಆ ಸಂದರ್ಭದಲ್ಲಿ ಬಿಜೆಪಿಯವರು ಎನ್. ಅಯ್.ಎ ತನಿಖೆಗೆ ಒತ್ತಾಯ ಮಾಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ನಮ್ಮೊಂದಿಗೆ ಚರ್ಚಿಸಿ ಕೂಡಲೇ ಸಿಬಿಐ ತನಿಖೆಗೆ ಆದೇಶವನ್ನು ಮಾಡಿದ್ದರು. ಈಗ ಸತ್ಯ ಹೊರಗೆ ಬಂದಿದ್ದು, ಸುಮಾರು ಐದು ವರ್ಷಗಳವರೆಗೆ ಅಮಾಯಕರು, ಆಪಾದಿತರಾಗಿ ಜೈಲು ಮತ್ತು ಕೋರ್ಟ್ ಅಲೆದು ತೊಂದರೆ ಪಟ್ಟಿದ್ದಾರೆ ಇದರ ಹೊಣೆಯನ್ನು ಈಗ ಯಾರು ಹೊರುತ್ತಾರೆ.
ಈ ರೀತಿಯ ರಾಜಕಾರಣವನ್ನು ಮಾಡುತ್ತಾ ಹೋದರೆ ಮುಂದೆ ಹೇಗೆ ಎಂದು ಪ್ರಶ್ನೆ ಮಾಡಿದರು. ಆ ಸಂದರ್ಭದಲ್ಲಿ ನಾನು ಹೋಗಿ ಮಾನವೀಯತೆ ದೃಷ್ಟಿಯಿಂದ ಆರ್ಥಿಕ ಸಹಾಯವನ್ನು ಮಾಡಿದ್ದೆ. ಇದು ನನ್ನ ಕರ್ತವ್ಯವಾಗಿತ್ತು.ಈ ವಿಷಯದ ಬಗ್ಗೆ ಅವರ ತಂದೆ ತಾಯಿಗಳಿಂದ ಪತ್ರಿಕಾಗೋಷ್ಠಿ ಮಾಡಿಸಲಾಯಿತು. ಇದರಿಂದಾಗಿ ಕರಾವಳಿ ಪ್ರದೇಶದಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ ಹಲವಾರು ಸ್ಥಾನವನ್ನು ಕಳೆದು ಕೊಳ್ಳಬೇಕಾಯಿತು. ಈ ರೀತಿಯ ರಾಜಕಾರಣದಿಂದ ಯಾರಿಗೂ ಒಳಿತು ಆಗುವುದಿಲ್ಲ ಎಂದು ಹೇಳಿದರು.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
04-10-2022
Leave a Comment