ಯಲ್ಲಾಪುರ : ಅರೆಬೈಲ್ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಬಂದ ಅಪರಿಚಿತರು, ಕಾರೊಂದನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ಹೊರೆಗೆ ಹಾಕಿ ಅವರ ಹಾಕಿ ಅವರ ಕಾರು ಸಹಿತ ಕಾರಿನಲ್ಲಿದ್ದ 2 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಗಡಗ್ಲಾಂಜ್ ತಾಲ್ಲೂಕಿನ ಕಾಳಬೈರಿ ರೋಡ್ ನಿವಾಸಿ ನಿಲೇಶ್ ಪಾಂಡುರAಗ ನಾಯ್ಕ (29) ಇವರು ಆ, 2 ನೇ ತಾರೀಖು ಬೆಳಗ್ಗಿನ ಜಾವ 1.30 ರ ಸುಮಾರಿಗೆ ತಾಲೂಕಿನ ಅರಬೈಲ್ ಗ್ರಾಮದಲ್ಲಿ ತಮ್ಮ ಸ್ವಫ್ಟ್ ಕಾರಿನಲ್ಲಿ ಹೋಗುತ್ತಿರುವಾಗ ಎಡರು ಕಾರಿನಲ್ಲಿ ಆಗಮಿಸಿದ 7-8 ಜನರು ಇವರ ಕಾರನ್ನು ಅಡ್ಡಗಟ್ಟಿ, ಇವರ ಮೇಲೆ ಹಲ್ಲೆ ನಡೆಸಿ, ಸುಮಾರು 2 ಲಕ್ಷ ಮೌಲ್ಯದ ಕಾರು ಹಾಗೂ 2,11,86,000 ರೂ. ಹಣವನ್ನು ಮತ್ತು ಸುಮಾರು 10 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್‌ಗಳನ್ನು ದರೋಡೆ ಮಾಡಿಸಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.
Leave a Comment