ಹಳಿಯಾಳ : ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಳಿಯಾಳ ತಾಲೂಕಿನ ಎಲ್ಲ ಮಹರ್ಷಿ ವಾಲ್ಮೀಕಿ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವದಲ್ಲಿ ಮಾನ್ಯ ಶಾಸಕರಾದ ಆರ್. ವಿ. ದೇಶಪಾಂಡೆ ಭಾಗಿಯಾಗಿ ಭಕ್ತಿ ಪೂರ್ವಕವಾಗಿ ಪುಷ್ಪನಮನಗಳನ್ನು ಅರ್ಪಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ಕೋಲಾಟ, ಭಜನಾಪದಗಳು ಜನ ಮನ ಸೆಳೆಯಿತು.
ತದ ನಂತರ ತಹಸೀಲ್ದಾರ ಕಚೇರಿ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಸುಂದರವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಸಮರ್ಥ ಮತ್ತು ತಂಡದವರು ನಾಡಗೀತೆಯನ್ನು ಹಾಡಿದರು. ಸಾವಿತ್ರಿ ಬಣ್ಣಪ್ಪನವರ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಉದ್ಘಾಟನೆಯನ್ನು ಜ್ಯೋತಿ ಬೆಳಗಿ, ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಎಲ್ಲ ಅತಿಥಿ ಗಣ್ಯರು ಕೂಡಿ ಮಾಡಿದರು. ಉದ್ಘಾಟಕರಾದ ತಹಸೀಲ್ದಾರ ಪ್ರಕಾಶ ಗಾಯಕ್ವಾಡ ರವರು ಮಾತನಾಡಿ ಜನರು ಸರ್ಕಾರ ಕೊಟ್ಟಂತಹ ಎಲ್ಲಾ ಸೌಲಭ್ಯಗಳ ಉಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಮೇಲೆ ಬರಬೇಕು ಮತ್ತು ಸಮಾಜಕ್ಕೆ ಕೊಡುಗೆಯನ್ನು ಕೊಡಬೇಕು ಎಂದರು.
ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೇ ಮಾತನಾಡಿ ರಾಮಾಯಣದಲ್ಲಿ ಇಡೀ ಸಮಾಜದ ಎಲ್ಲ ಪಾತ್ರಗಳು ಕಾಣುತ್ತವೆ. ಮನುಕುಲದ ಒಳಿತಿಗಾಗಿ ರಾಮಾಯಣವನ್ನು ಬರೆಯಲಾಗಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆದ ಪರಶುರಾಮ ಸಿಂಧೆ ಹಿತವಚನಗಳನ್ನು ನುಡಿದರು.
ಉನ್ಯಾಸಕ ಮೌನೇಶ ಬಾರಿಕೆರ ರವರು ತುಂಬಾ ಸುಂದರವಾಗಿ ಆಳವಾಗಿ ಮಹರ್ಷಿ ವಾಲ್ಮೀಕಿ, ರಾಮಾಯಣ ಹಾಗೂ ಸಮಾಜದ ಸ್ಥಿತಿಗತಿಗಳ ಬಗ್ಗೆ ಉಪನ್ಯಾಸವನ್ನು ನೀಡುವುದರ ಮೂಲಕ ಎಲ್ಲರ ಮನ ಸೆಳೆದರು. ನಂತರ ಶಾಲೆ ಮತ್ತು ಕಾಲೇಜುಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಸನ್ಮಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಲಕ್ಷ್ಮೀದೇವಿ, ಗ್ರೇಡ್-2 ತಹಸೀಲ್ದಾರ ಜಿ. ಕೆ. ರತ್ನಾಕರ, ಸಾವಿತ್ರಿ, ಪುರಸಭೆ ಸದಸ್ಯರಾದ ಶಮೀಮಾ ಜಂಬೂವಾಲೆ, ಮೋಹನ ಮೇಲಗಿ, ಸಮಾಜದ ಮುಖಂಡರಾದ ಜಯಶ್ರೀ ವಾಲ್ಮೀಕಿ, ಫಕ್ಕೀರವ್ವ, ಕರಿಯಪ್ಪ ನಾಯಕ, ಬಸವ್ವಾ ನಾಯಕ, ಸಂತೋಷ ನಾಯಕ, ಸಮಾಜದ ಎಲ್ಲ ಹಿರಿಯರು ಮಕ್ಕಳು ಪಾಲ್ಗೊಂಡಿದ್ದರು.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
09-10-2022
Leave a Comment