ಹೊನ್ನಾವರ : ಪಟ್ಟಣದ ಶರಾವತಿ ವೃತ್ತದ ಸಮೀಪ ಬೈಕ್ ನಿಯಂತ್ರಣ ತಪ್ಪಿ ಬಿದ್ದ ವ್ಯಕ್ತಿಯೊಬ್ಬರಿಗೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಸಾರ್ವಜಿನಿಕರು ಸಹಾಯ ಮಾಡಿ ಪಕ್ಕಕ್ಕೆ ಕರೆದೊಯ್ಯುತ್ತಿದ್ದಾಗ ವ್ಯಕ್ತಿಯೊಬ್ಬನು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗೋವಾ ಮುಖ್ಯಮಂತ್ರಿಯವರು ಹೊನ್ನಾವರ ಮಾರ್ಗವಾಗಿ ಬೆಳ್ತಂಗಡಿ ಹೊಗುತ್ತಿದ್ದರಿಂದ ಶರಾವತಿ ವೃತ್ತದ ಸಮೀಪ ಗಸ್ತಿನಲ್ಲಿದ ಪೊಲೀಸ್ ಸಿಬ್ಬಂದಿಗಳು ಬೈಕ್ ನಿಂದ ಕೆಳಗೆ ಬಿದ್ದ ವ್ಯಕ್ತಿಯನ್ನು ಪಕ್ಕಕ್ಕೆ ಕರೆದುಕೊಂಡು ಹೊಗುತ್ತಿದ್ದಾಗ ಅಲ್ಲಿ ಬಂದ ರಾಘವೇಂದ್ರ ಶೇಟ್ ಎನ್ನುವ ವ್ಯಕ್ತಿ ಆತನಿಗೆ ಸಂಬAಧವೇ ಇಲ್ಲದ ವಿಷಯಕ್ಕೆ, ಅವರನ್ನು ಎಲ್ಲಿ ಕರೆದುಕೊಂಡು ಹೊಗುತ್ತೀರಿ ಎಂದು ಪೊಲೀಸ್ ಸಿಬ್ಬಂಧಿಯನ್ನು ಪ್ರಶ್ನಿಸಿ ಹಲ್ಲೆ ಮಾಡಲು ಮುಂದಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾನೆ. ಜೊತೆಗೆ ರಸ್ತೆಯ ಮಧ್ಯದಲ್ಲಿ ತಾನು ತಂದ ಕಾರನ್ನು ನಿಲ್ಲಿಸಿ ಟ್ರಾಫಿಕ್ ಉಂಡಾಗುವAತೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡದೇ ಸಾರ್ವಜನಕರಿಗೂ ಸಮಸ್ಯೆ ಮಾಡಿದ್ದಾನೆ ಎಂದು ಪೊಲೀಸರಿ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಅಧಿಕಾಗಳು ಕರ್ತವ್ಯಕ್ಕೆ ಅಡ್ಡಿ ಮಾಡಿದ ಕಾರಣಕ್ಕೆ ಮತ್ತು ಸುಖಾಸುಮ್ಮನೆ ಹಲ್ಲೆಗೆ ಮುಂದಾಗಿರುದಲ್ಲದೆ ರಸ್ತೆಮಧ್ಯೆ ವಾಹನ ನಿಲ್ಲಿಸಿ ಸಮಸ್ಯೆ ಉಂಟು ಮಾಡಿರುದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Leave a Comment