ಹೊನ್ನಾವರ : ತಾಲೂಕಿನ ಕೆರೆಕೋಣ ಸಮೀಪ ಮನೆಯ ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನ ಸಾರ್ವಜನಿಕರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಸಾಲ್ಕೋಡ್ ಗ್ರಾಮದ ಕೆರೆಕೋಣ ಸಮೀಪದಲ್ಲಿ ಅಂದಜು ಒಂದೂವರೆ ವರ್ಷ ವಯಸ್ಸಿನ ಚಿರತೆಯೊಂದು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿತ್ತು. ಚಿರತೆ ಬಾವಿಯಿಂದ ಮೇಲೆ ಬರಲು ಹರಸಹಸ ಪಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸಾರ್ವಜನಿಕರ ಸಹಕಾರದ ಮೇರೆಗೆ ಏಣಿ ಹಾಗೂ ಬಲೆ ಮುಂತಾದ ರಕ್ಷಣಾ ಸಲಕರಣೆಯನ್ನು ಬಳಸಿ ಸುರಕ್ಷಿತವಾಗಿ ಚಿರತೆಯನ್ನು ಮೇಲಕ್ಕೆತ್ತಿ ಕಾಡಿಗೆ ಬಿಟ್ಟಿದ್ದಾರೆ. ಆರ್ ಎಫ್ ಓ ವಿಕ್ರಂ ರೆಡ್ಡಿ ಸಲಹೆ ಮೇರೆಗೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment