ನವದೆಹಲಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಚೀನಾ ಮಹಿಳೆಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ಕಾಯ್ ರುವೋ ಎಂದು ಗುರುತಿಸಲಾಗಿದ್ದು ಅವರು ಚೀನಾದ ಹೈನನ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.
ನೇಪಾಳಿ ಪ್ರಜೆ ಎಂದು ಹೇಳಿಕೊಂಡು ಅವರು ದೆಹಲಿಯಲ್ಲಿ ವಾಸವಾಗಿದ್ದರು. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅವರ ಮೇಲೆ ಭಾರತೀಯ ದಂಡ ಸಂಹಿತೆ 120ಬಿ (ಅಪರಾಧಿಕ ಒಳಸಂಚು), 419(ಬೇರೊಂದು ಹೆಸರು ಹೇಳಿ ಮೋಸ ಮಾಡುವುದು), 467(ಮಹತ್ವದ ದಾಖಲೆಗಳನ್ನು ಫೋರ್ಜರಿ ಮಾಡುವುದು) ಮುಂತಾದ ಆರೋಪಗಳನ್ನು ಹೊರಿಸಿ ಪ್ರಕರಣದಾಖಲಿಸಿಕೊಳ್ಳಲಾಗಿದೆ.
Leave a Comment