ಹೊನ್ನಾವರ: ಮಂಕಿ ಅರಣ್ಯ ವಲಯ ವ್ಯಾಪ್ತಿಯ ಭಟ್ಕಳ ತಾಲೂಕಿನ ಕುಕ್ಕೋಡಿಯಲ್ಲಿ ಅನಧಿಕೃತ ನಾಡಬಂದೂಕು ಬಳಸಿ ಕಡವೆಯನ್ನು ಕೊಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಭಟ್ಕಳ ಹೆಗಡೆಗದ್ದೆ ಮಾವಳ್ಳಿ ನಿವಾಸಿ ಪ್ರಕಾಶ ನಾಯ್ಕವನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ.ಟಿ.ಬೋರಯ್ಯ, ಆರ್ಎಫ್ಓ ಸವಿತಾ ಆರ್.ದೇವಾಡಿಗ, ಡಿಆರ್ಎಫ್ಓ ಸಂದೀಪ ಮಡಿ, ಯೋಗೇಶ ಡಿ.ಮೋಗೇರ, ಮಂಜುನಾಥ ಆರ್.ನಾಯ್ಕ ಮತ್ತು ಅರಣ್ಯ ರಕ್ಷಕ ಬಸವರಾಜ ಲಮಾಣಿ, ರಾಮ ನಾಯ್ಕ, ಮಹಾಬಲ ಗೌಡ ಹಾಗೂ ಕ್ಷೇಮಾಭಿವೃದ್ಧಿ ನೌಕರರಾದ ಅನಂತ ನಾಯ್ಕ, ರಾಮಚಂದ್ರ ದೇವಾಡಿಗ, ಅಣ್ಣಪ್ಪ ಹಸ್ಥರ ಇದ್ದರು.
Leave a Comment